Asianet Suvarna News Asianet Suvarna News

ಒಟ್ಟಿಗೆ ಗರ್ಭಿಣಿಯರಾದ 16 ನರ್ಸ್: ಆ ಐಸಿಯು ‘ಜಾದೂ’ ಏನು?

ಆಸ್ಪತ್ರೆಯ 16 ನರ್ಸ್ ಒಟ್ಟಿಗೆ ಪ್ರಗ್ನೆಂಟ್! ತಲೆ ಮೇಲೆ ಕೈಹೊತ್ತು ಕುಳಿತ ಆಸ್ಪತ್ರೆ! ಅರಿಜೋನಾದ ಬ್ಯಾನರ್ ಡೆಸರ್ಟ್ ಆಸ್ಪತ್ರೆ! ಧೀರ್ಘ ರಜೆಗಾಗಿ ಒಟ್ಟಿಗೆ ಗರ್ಭಿಣಿಯರಾದ ದಾದಿಯರು  

16 ICU Nurses At Arizona Hospital Are All Pregnant
Author
Bengaluru, First Published Aug 21, 2018, 7:55 PM IST

ಮೆಸಾ(ಆ.21): ಸರ್ ಗರ್ಭಿಣಿ ರಜೆ ಬೇಕು ಅಂತಾ ಓರ್ವ ನರ್ಸ್ ತನ್ನ ಹಿರಿಯ ವೈದ್ಯರ ಬಳಿ ಮನವಿ ಮಾಡಿದ್ದಳು. ಅಷ್ಟೇ ತಾನೆ ಹೋಗಮ್ಮ ಮುದ್ದಾದ ಮಗು ನಿನ್ನದಾಗಲಿ ಅಂತಾ ಡಾಕ್ಟರ್ ಕೂಡ ರಜೆ ಮಂಜೂರು ಮಾಡಿ ಹೊರ ಬಂದ್ರೆ ಇದೇ ಕಾರಣ ನೀಡಿ ಇನ್ನೂ 15 ಜನ ನರ್ಸ್ ರಜೆ ಮಂಜೂರಾತಿಗಾಗಿ ಹೊರಗಡೆ ಕಾಯುತ್ತಾ ನಿಂತಿದ್ದರು.


ಅಷ್ಟೇ, ಒಟ್ಟಿಗೆ 16 ಗರ್ಭಿಣಿ ನರ್ಸ್ ಗಳನ್ನು ಕಂಡ ಆ ವೈದ್ಯ ಹೌಹಾರಿ ಹೋಗಿದ್ದಾನೆ.  ಇದು ಅರಿಜೋನಾದ ಬ್ಯಾನರ್ ಡೆಸರ್ಟ್ ಆಸ್ಪತ್ರೆಯಲ್ಲಿ ನಡೆದ ಘಟನೆ. ಇಲ್ಲಿನ ತುರ್ತು ನಿಗಾ ಘಟಕದಲ್ಲಿ ಕೆಲಸ ಮಾಡುವ ಒಟ್ಟು 16 ನರ್ಸ್ ಗಳು ಒಟ್ಟಿಗೆ  ಗರ್ಭಿಣಿಯರಾಗಿದ್ದು, ಆಸ್ಪತ್ರೆಯ ಉಳಿದ ಸಿಬ್ಬಂದಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಒಟ್ಟಿಗೆ 16 ಜನ ನರ್ಸ್ ಗರ್ಭಿಣಿಯಾಗಲು  ಹೇಗೆ ಸಾಧ್ಯ ಎಂದು ಎಲ್ಲರೂ ತಲೆ ಕೆಡಿಸಿಕೊಂಡು ಕೂತಿದ್ದರೆ, ಇದಕ್ಕೆ ಕಾರಣವನನ್ನೂ ಈ ದಾದಿಯರೇ ನೀಡಿದ್ದಾರೆ. ಆಸ್ಪತ್ರೆ ನಿಯಮದ ಪ್ರಕಾರ ನರ್ಸ್ ಗರ್ಭಿಣಿಯಾದರೆ ಅವರ ಬದಲು ಬೇರೊಂದು ನರ್ಸ್ ವ್ಯವಸ್ಥೆ ಮಾಡಿ ಆಕೆಗೆ ಧೀರ್ಘ ರಜೆ ಕೊಡಲಾಗುತ್ತದೆ.

ಹೀಗಾಗಿ ಧೀರ್ಘ ರಜೆ ಪಡೆಯಲು ಮತ್ತು ಒಟ್ಟಿಗೆ ಹಾಲಿಡೇ ಎಂಜಾಯ್ ಮಾಡಲು ಈ ನರ್ಸ್ ಗಳು ಯೋಜನೆ ರೂಪಿಸಿದ್ದಾರೆ. ಅದರಂತೆ ಎಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿಯಾಗುವಂತೆ  ಫ್ಯಾಮಿಲಿ ಪ್ಲ್ಯಾನಿಂಗ್ ನಡೆಸಿದ್ದಾರೆ. ಅದರಂತೆ ಇದೀಗ ಬ್ಯಾನರ್ ಡೆಸರ್ಟ್ ಆಸ್ಪತ್ರೆಯ ಐಸಿಯು ಘಟಕದ ಎಲ್ಲಾ ನರ್ಸ್ ಗಳೂ ಗರ್ಭಿಣಿಯರಾಗಿದ್ದು, ಎಲ್ಲರಿಗೂ ರಜೆ ನೀಡುವ ಅನಿವಾರ್ಯತೆ ಆಸ್ಪತ್ರೆಯದ್ದಾಗಿದೆ.

Follow Us:
Download App:
  • android
  • ios