ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಮಹಿಳೆಯರ ಜಡೆಗಳಿಗೆ ಸಂಚಕಾರ ಎದುರಾಗಿದೆ. ಕಳೆದ 15 ದಿನಗಳಲ್ಲಿ ಮಹಿಳೆಯರ ಜಡೆಯನ್ನು ಕತ್ತರಿಸಿದ 15 ಘಟನೆಗಳು ವರದಿಯಾಗಿವೆ. ಆದರೆ, ಜಡೆಯನ್ನು ಯಾರು ಕತ್ತರಿಸುತ್ತಿದ್ದಾರೆ. ಅವರ ಉದ್ದೇಶವೇನು ಎನ್ನುವುದು ಮಾತ್ರ ನಿಗೂಢ.

ಗುಡಗಾಂವ್(ಜು.31): ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಮಹಿಳೆಯರ ಜಡೆಗಳಿಗೆ ಸಂಚಕಾರ ಎದುರಾಗಿದೆ. ಕಳೆದ 15 ದಿನಗಳಲ್ಲಿ ಮಹಿಳೆಯರ ಜಡೆಯನ್ನು ಕತ್ತರಿಸಿದ 15 ಘಟನೆಗಳು ವರದಿಯಾಗಿವೆ. ಆದರೆ, ಜಡೆಯನ್ನು ಯಾರು ಕತ್ತರಿಸುತ್ತಿದ್ದಾರೆ. ಅವರ ಉದ್ದೇಶವೇನು ಎನ್ನುವುದು ಮಾತ್ರ ನಿಗೂಢ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಚಿತ್ರ ಕೃತ್ಯದಿಂದಾಗಿ ಮೇವಾತ್ ಗ್ರಾಮಗಳ ಮಹಿಳೆಯರಲ್ಲಿ ಆತಂಕ ಶುರುವಾಗಿದೆ. ಬಹುತೇಕ ಮಹಿಳೆಯರಿಗೆ ಪ್ರಜ್ಞೆ ತಪ್ಪಿಸಿ ಅವರ ಜಡೆಗಳನ್ನು ಕತ್ತರಿಸಲಾಗುತ್ತಿದೆ. ಇದರ ಹಿಂದೆ ಕಳ್ಳಕಾಕರ ಕೈವಾಡ ಇರುವುದೂ ಸಾಬೀತಾಗಿಲ್ಲ. ಪ್ರಜ್ಞೆತಪ್ಪಿಸಿ ಜಡೆ ಕತ್ತರಿಸಿದ್ದರೂ ಯಾವುದೇ ವಸ್ತುವೂ ಕಳ್ಳತನವಾಗಿಲ್ಲ. ಹೀಗಾಗಿ ಘಟನೆ ಸಂಬಂಧ ಯಾವುದೇ ಎಫ್'ಐಆರ್ ದಾಖಲಾಗಿಲ್ಲ.

ಒಂದು ತಿಂಗಳ ಹಿಂದೆ ರಾಜಸ್ಥಾನದ ಕೆಲ ಭಾಗಗಳಲ್ಲಿ ಮಹಿಳೆಯರ ಜಡೆ ಕತ್ತರಿಸಿದ ಘಟನೆಗಳು ವರದಿಯಾಗಿದ್ದವು. ಆ ಘಟನೆ ಇದೀಗ ಗುಡಗಾಂವ್‌ಗೂ ವಿಸ್ತರಿಸಿದೆ.