ಮುಂಬೈ (ಸೆ.16): ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅವಘಡಗಳಲ್ಲಿ ಮಹಾರಾಷ್ಟ್ರದಾದ್ಯಂತ 15 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ 7 ಮಂದಿ, ವರದಾನಲ್ಲಿ ಮೂವರು, ಪುಣೆಯಲ್ಲಿ ಇಬ್ಬರು ಹಾಗೂ ಔರಂಗಾಬಾದ್‌, ನಾಂದೇಡ್‌, ಜಲಗಾಂವ್‌ನಲ್ಲಿ ತಲಾ ಒಬ್ಬರು ನೀರುಪಾಲಾಗಿದ್ದಾರೆ.

ನದಿ, ಬಾವಿ ಹಾಗೂ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವ ವೇಳೆ ದುರಂತ ಸಂಭವಿಸಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಮುಳುಗು ತಜ್ಞರು ಶವಗಳನ್ನು ಹೊರತೆಗೆದಿದ್ದಾರೆ. 

ಕರ್ನಾಟಕದ ಶಿವಮೊಗ್ಗದಲ್ಲಿ ಕೂಡ ಸೆ.7 ರಂದು ಗಣೇಶ ನಿಮಜ್ಜನ ವೇಳೆ ದೋಣಿ ಮುಳಗಿ 12 ಮಂದಿ ಮೃತಪಟ್ಟ ಘಟನೆ ನಡೆದಿತ್ತು.

ಇನ್ನು ಗುರುವಾರ ಸಂಜೆ ಮಧ್ಯಪ್ರದೇಶದ ರತ್ಲಾಮ್‌ನ ಸಲಾನ ಪ್ರದೇಶದಲ್ಲಿ ಕೂಡ ಗಣೇಶ ವಿಸರ್ಜನೆ ವೇಳೆ ನಾಲ್ವರು ನೀರು ಪಾಲಾಗಿದ್ದ ಘಟನೆ ನಡೆದಿದೆ.