Asianet Suvarna News Asianet Suvarna News

ಮೆಟ್ರೋ, ಬಿಎಂಟಿಸಿ ಸ್ಥಗಿತ, ಮೂವರು ಪೊಲೀಸರಿಗೆ ಗಾಯ : ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

144 section at bengalore 50 bus burn

ಬೆಂಗಳೂರು(ಸೆ.12): ಕಾವೇರಿ ಗಲಭೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ನಗರದಲ್ಲಿ ಮೆಟ್ರೋ ಹಾಗೂ ಬಿಎಂಟಿಸಿ ಸಂಚಾರವನ್ನು ಸ್ಥಗಿತಗೊಳಿಸುವುದರ ಜೊತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಮೈಸುರು ರಸ್ತೆ, ಕೆಂಗೇರಿ ಉಪನಗರ, ಬಸವನಗುಡಿ, ಬನಶಂಕರಿ, ಹೊಸಕೆರೆಹಳ್ಳಿ, ಜಯನಗರ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಬಸ್'ಗಳಿಗೆ  ಬೆಂಕಿ ಹಚ್ಚಲಾಗಿದೆ. ತಮಿಳು ಮೂಲದವರ ಆಸ್ತಿಗಳಿರುವ ವಾಣಿಜ್ಯ ಕೇಂದ್ರ, ಹೋಟೆಲ್'ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ನಗರಾದಾದ್ಯಂತ ನಿಷಾಧಾಜ್ಞೆ ಜಾರಿಗೊಳಿಸಲಾಗಿದೆ. ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್, ಅರೆಸೇನಾ ಪಡೆಯ ಬಿಗಿ ಬಂದೂಬಸ್ತ್ ಏರ್ಪಡಿಸಲಾಗಿದೆ.

ಕೆಪಿಎನ್ ಟ್ರಾವಲ್ಸ್'ಗೆ ಬೆಂಕಿ: 35 ಬಸ್'ಗಳು ಭಸ್ಮ

ಉದ್ರಿಕ್ತರ ಗುಂಪು ನೈಸ್ ರಸ್ತೆಯಲ್ಲಿರುವ ಕೆಪಿ'ಎನ್ ಟ್ರಾನೆಲ್ಸ್'ಗೆ ಬೆಂಕಿಯಿಟ್ಟ ಪರಿಣಾಮ 40ಕ್ಕೂ ಹೆಚ್ಚು ಬಸ್'ಗಳು ಸುಟ್ಟು ಭಸ್ಮವಾಗಿವೆ.

ಪೊಲೀಸ್ ವಾಹನಕ್ಕೆ ಬೆಂಕಿ ಯತ್ನ, ಗಾಳಿಯಲ್ಲಿ ಗುಂಡು

ಲಗ್ಗೆರೆಯ ಸಮೀಪದ ಗೋವಿಂದರಾಜಪುರದಲ್ಲಿ ಉದ್ರಿಕ್ತರ ಗುಂಪು ಪೊಲೀಸ್ ವಾಹನಕ್ಕೆ ಬೆಂಕಿಯಿಡಲು ಯತ್ನಿಸಿದ್ದು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬರು ಎಸ್'ಐ ಹಾಗೂ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.

ಶಾಂತಿ ಕಾಪಾಡುವಂತೆ ಸಿಎಂ, ಗೃಹ ಸಚಿವರ ಮನವಿ

ಈ ನಡುವೆ ಗಲಭೆಯನ್ನು ಬಿಟ್ಟು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಹೋಗಲು ಸಹಕರಿಸಬೇಕೆಂದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಅಲ್ಲದೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ

ಪ್ರಕರಣ ದಾಖಲು

ಸಂತೋಷ್​ ಎಂಬ ಯುವಕನಿಂದ ಈ ಗಲಾಟೆ ಶುರುವಾಗಿದ್ದು, ಸಂತೋಷ್​ ವಿರುದ್ಧ ಸ್ವಯಂಪ್ರೇರಣೆ ಪ್ರಕರಣ ದಾಖಲಿಸಿದ್ದೇವೆ. ಸಂತೋಷ್​ ಕುಟುಂಬ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಆತನ ವಿರುದ್ಧ ​ ವಿರುದ್ಧ ತನಿಖೆ ನಡೆಯುತ್ತಿದೆ' ಎಂದು  ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ.

Follow Us:
Download App:
  • android
  • ios