ಹೈದರಾಬಾದ್ (ಅ.08): ಜೈನ ಧರ್ಮದ ಆಚರಣೆ ಚೌಮಾಸ ಸಂದರ್ಭದಲ್ಲಿ 68 ದಿನಗಳ ಕಾಲ ಉಪವಾಸ ಮಾಡಿದ 13 ವರ್ಷದ ಬಾಲಕಿ ಹೈದರಾಬಾದ್ ನಲ್ಲಿ ಮೃತಪಟ್ಟಿದ್ದಾಳೆ.

ಹೈದರಾಬಾದ್ (ಅ.08): ಜೈನ ಧರ್ಮದ ಆಚರಣೆ ಚೌಮಾಸ ಸಂದರ್ಭದಲ್ಲಿ 68 ದಿನಗಳ ಕಾಲ ಉಪವಾಸ ಮಾಡಿದ 13 ವರ್ಷದ ಬಾಲಕಿ ಹೈದರಾಬಾದ್ ನಲ್ಲಿ ಮೃತಪಟ್ಟಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

8 ತರಗತಿಯಲ್ಲಿ ಓದುತ್ತಿರುವ ಆರಾಧನಾ ಮೃತಪಟ್ಟ ದುರ್ದೈವಿ. ಚೌಮಾಸ ಉಪವಾಸ ಮುಗಿದ ಎರಡು ದಿನಗಳ ಬಳಿಕ ಆರಾಧನಾ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಜೈನ ಧರ್ಮದ ಪ್ರಕಾರ ಚೌಮಾಸ ಆಚರಣೆಯು ದೊಡ್ಡವರು ಮಾಡುವಂತದ್ದು. ಆದರೂ ಆರಾಧನಾ ಕುಟುಂಬದವರು ಯಾಕೆ ಅವಳಿಂದ ಉಪವಾಸ ಮಾಡಿಸಿದರು ಎನ್ನುವ ಪ್ರಶ್ನೆ ಉದ್ಭವವಾಗಿದೆ.