ಪಾಟ್ನ(ಏ.30): ನಿಮ್ಮ ದಮ್ಮಯ್ಯ ನನ್ನನ್ನು ಬಿಟ್ಟುಬಿಡಿ ಎಂದು ಕಾಲಿಡಿದು ಗೋಗರೆದರೂ 13 ವರ್ಷದ ಬಾಲಕಿಯನ್ನು 8 ಮಂದಿ ಯುವಕರು ಬೆತ್ತಲೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ಜನಾನ್'ಬಾದ್ ಜಿಲ್ಲೆಯ ರಾಮ್'ದನಿ ಗ್ರಾಮದಲ್ಲಿ ನಡೆಯಿದೆ.

ಘಟನೆಯಲ್ಲಿ ಇಬ್ಬರು ವಿಡಿಯೋ ಮಾಡುತ್ತಿದ್ದರೆ ಉಳಿದವರು ಬಾಲಕಿಯನ್ನು ಬೆತ್ತಲೆಗೊಳಿಸುವಲ್ಲಿ ನಿರತರಾಗಿದ್ದರು. ಬಾಲಕಿ ನನ್ನನ್ನು ಬಿಡಿ ಅಣ್ಣ ಎಂದು ಪರಿಪರಿಯಾಗಿ ವಿನಂತಿಸಿದರೂ ಘೋರವಾಗಿ ಕಿರುಕುಳ ನೀಡುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ 18 ವರ್ಷ ಮೇಲ್ಪಟ್ಟ ಮೂವರನ್ನು ಮಕ್ಕಳ ಲೈಂಗಿಕ ಕಿರುಕುಳ ಸಂರಕ್ಷಣ ಕಾಯಿದೆಯಡಿ ಬಂಧಿಸಲಾಗಿದೆ.

ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಫೋಕ್ಸೋ ಕಾಯಿದೆಯನ್ನು ತಿದ್ದುಪಡಿ ಮಾಡಿ ಜೀವಾವಧಿ ಶಿಕ್ಷೆಗೆ ಬದಲಾಗಿ ಗಲ್ಲು ಶಿಕ್ಷೆಯನ್ನಾಗಿ ಮಾರ್ಪಡಿಸಿದೆ. ಕೆಲ ದಿನಗಳ ಹಿಂದಷ್ಟೆ ಜಮ್ಮು ಕಾಶ್ಮೀರದ ಕಟುವಾದಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ಯುವಕರ ಗುಂಪು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಮಕ್ಕಳ ಮೇಲಿನ  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.