ಅಮ್ಮನ ಆಸೆ ಈಡೇರಿಸಲು 23 ವರ್ಷದ ಯುವತಿ ವಿವಾಹವಾದ 13ರ ಬಾಲಕ

news | Sunday, May 13th, 2018
Sujatha NR
Highlights

ಅಮ್ಮನ ಆಸೆ ಈಡೇರಿಸುವ ಸಲುವಾಗಿ 13 ವರ್ಷದ ಬಾಲಕನೋರ್ವ 23 ವರ್ಷದ ಯುವತಿಯನ್ನು ವಿವಾಹವಾದ ಘಟನೆ  ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೊಟೊ ವೈರಲ್ ಆಗುತ್ತಿದ್ದಂತೆ ಪೊಲೀಸರಿಗೆ ಈ ವಿಚಾರ ತಿಳಿದು ಬಂದಿದೆ.  

ಕರ್ನೂಲ್ (13): ಅಮ್ಮನ ಆಸೆ ಈಡೇರಿಸುವ ಸಲುವಾಗಿ 13 ವರ್ಷದ ಬಾಲಕನೋರ್ವ 23 ವರ್ಷದ ಯುವತಿಯನ್ನು ವಿವಾಹವಾದ ಘಟನೆ  ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆ  ಫೊಟೊ ವೈರಲ್ ಆಗುತ್ತಿದ್ದಂತೆ ಈ ವಿಚಾರ ಬೆಳಕಿಗೆ ಬಂದಿದೆ.  

ಕಳೆದ ಏಪ್ರಿಲ್ 27ರಂದೇ ಈ ವಿವಾಹ ಸಮಾರಂಭವು ಜರುಗಿದೆ. 13 ವರ್ಷದ ಈ ಬಾಲಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆತನ ತಂದೆ ಮದ್ಯ ವ್ಯಸನಿಯಾಗಿದ್ದಾರೆ.  ಕುಟುಂಬದ ನಾಲ್ವರು ಮಕ್ಕಳಲ್ಲಿ ಬಾಲಕನೇ ಹಿರಿಯನಾಗಿದ್ದು, ಆದ್ದರಿಂದ ತನ್ನ ಮಗನ ವಿವಾಹ ನೆರವೇರಿಸಬೇಕು ಎಂದು ಅನಾರೋಗ್ಯ ಪೀಡಿತ ತಾಯಿ ಬಯಸಿದ್ದರಿಂದ ಈ ವಿವಾಹ ಜರುಗಿದೆ. 

ತಾನು ಸತ್ತ ನಂತರ ಮನೆಯನ್ನು ನಿರ್ವಹಿಸಲು ಜವಾಬ್ದಾರಿಯುತ ವಯಸ್ಕ ಯುವತಿ ಬೇಕು ಎಂದು ತಾಯಿ ಆಸೆ ಪಟ್ಟಿದ್ದು, ಈ ಮದುವೆ ಮಾಡಲಾಗಿದೆ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ. 

ಮದುವೆ ವಿಚಾರ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಅವರ ಕುಟುಂಬಸ್ಥರು ಯಾರೂ ಕೂಡ ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ. 

Comments 0
Add Comment

  Related Posts

  Akash Ambani Marriage Video

  video | Wednesday, March 28th, 2018

  RajKumar Family Marriage

  video | Wednesday, March 28th, 2018

  Son Hitting Mother at Ballary

  video | Monday, March 26th, 2018

  Ranjitha Speaks About Ramya Marriage

  video | Wednesday, March 21st, 2018

  Akash Ambani Marriage Video

  video | Wednesday, March 28th, 2018
  Sujatha NR