ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ, ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ!

ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ!| ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ ರು. ಪತ್ತೆ| ಲಂಚದ ರೂಪದಲ್ಲಿ ಭಾರೀ ಚಿನ್ನ, ಹಣ ಸಂಗ್ರಹ

13 Tonnes of Gold Found in the Basement of Former Chinese Mayor

ಬೀಜಿಂಗ್‌[ಅ.05]: ಭ್ರಷ್ಟ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಮನೆಯಲ್ಲಿ ಬಚ್ಚಿಟ್ಟಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕಮ್ಯುನಿಸ್ಟ್‌ ರಾಷ್ಟ್ರ ಚೀನಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಭ್ರಷ್ಟಅಧಿಕಾರಿಯೊಬ್ಬನ ಮನೆಯನ್ನು ಶೋಧಿಸಲು ಹೋದ ಅಧಿಕಾರಿಗಳೇ ಒಮ್ಮೆ ಬೇಸ್ತು ಬಿದ್ದಿದ್ದಾರೆ. ಆತನ ಮನೆಯಲ್ಲಿ ಸಿಕ್ಕಿದ್ದು ಒಂದೆರಡು ಕೆ.ಜಿ. ಚಿನ್ನ ಅಲ್ಲ. ಬರೋಬ್ಬರಿ 13.5 ಟನ್‌ನಷ್ಟುಚಿನ್ನದ ಬಿಸ್ಕಟ್‌ಗಳು ಮತ್ತು ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆತ 2.61 ಲಕ್ಷ ಕೋಟಿ ರು. ಲಂಚದ ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಇರಿಸಿದ್ದ ಸಂಗತಿಯೂ ಬಯಲಾಗಿದೆ.

ಬಾರ್ ಗೆ ಮದ್ಯ ಸರಬರಾಜು: ಸಿಸಿಬಿ ಅಧಿಕಾರಿಗಳ ಬಿಸಿ

ಹೈಕೌ ಪ್ರಾಂತ್ಯದ ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಜಾಂಗ್‌ ಎಂಬಾತ ಈ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರಿ. ಮೇಯರ್‌ಗೆ ಸಮಾನವಾದ ಅಧಿಕಾರ ಹೊಂದಿರುವ ಈತ ಇಷ್ಟೊಂದು ಭ್ರಷ್ಟಾಚಾರ ಎಸಗಿದ್ದು ನಿಜವೇ ಆದಲ್ಲಿ ಚೀನಾದ ಅತಿ ಶ್ರೀಮಂತ ವ್ಯಕ್ತಿ ಜಾಕ್‌ ಮಾ ಬಳಿ ಇರುವ 2.61 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿ ನ ಆಸ್ತಿ ಸಂಪಾದಿಸಿದಂತಾಗುತ್ತದೆ.

ಮೈಸೂರು : 8 ಕೋಟಿ ಅನುದಾನ ಹಿಂದಕ್ಕೆ ಪಡೆದ ಸರ್ಕಾರ

ಜಾಂಗ್‌ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಸಾವಿರಾರು ಚಿನ್ನದ ಗಟ್ಟಿಗಳು ಹಾಗೂ ಇಟ್ಟಿಗೆಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಸುಮಾರು 4,524 ಕೋಟಿ ರು. ಎಂದು ಅಂದಾಜಿಸಲಾಗಿದೆ. ಅಲ್ಲದೇ ಆತ ಹಲವಾರು ಐಷಾರಾಮಿ ವಿಲ್ಲಾಗಳನ್ನು ಸಹ ಸ್ವೀಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಜಾಂಗ್‌ನನ್ನು ಅಧಿಕಾರದಿಂದ ಕಿತ್ತು ಹಾಕಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ.

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 

Latest Videos
Follow Us:
Download App:
  • android
  • ios