ಮೈಸೂರು : 8 ಕೋಟಿ ಅನುದಾನ ಹಿಂದಕ್ಕೆ ಪಡೆದ ಸರ್ಕಾರ
ಸರ್ಕಾರದಿಂದ ಬಂದ ಅನುದಾನವನ್ನು ಮತ್ತೆ ಸರ್ಕಾರ ವಾಪಸ್ ಪಡೆದ ಗಟನೆ ನಡೆದಿದೆ. ಅಭಿವೃದ್ಧಿ ಗಾಗಿ ನೀಡಿದ್ದ 8 ಕೋಟಿ ರು. ವಾಪಸ್ ಪಡೆದುಕೊಂಡಿದೆ.
ಎಚ್.ಡಿ. ಕೋಟೆ [ಸೆ.14]: ತಾಲೂಕಿನ ವಡ್ಡರಗುಡಿ ಗ್ರಾಮದಲ್ಲಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ 1 ಕಿಮೀ ರಸ್ತೆ ಕಾಮಗಾರಿ ಮತ್ತು ಅಣ್ಣೂರು- ಗದ್ದಿಗೆ ರಸ್ತೆ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅನಿಲ್ ಚಿಕ್ಕಮಾದು ಅವರು, ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಬಾರಿ ಮಳೆಯಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು ಸರ್ಕಾರದಿಂದ ಯಾವುದೇ ಪರಿಹಾರದ ಹಣ ಬಂದಿಲ್ಲ. ತಾಲೂಕಿನಲ್ಲಿ ಸುಮಾರು 2.500 ಮನೆಗಳು ಹಾನಿಯಾಗಿದೆ, ಅಂತೆಯೇ ಸುಮಾರು 2.50 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿ ಹಾನಿಯಾಗಿದ್ದು 180 ಮಂದಿಗೆ 10 ಸಾವಿರದ ಚೆಕ್ ವಿತರಿಸಲಾಗಿದೆ. ತಾಲೂಕಿನ ಪ್ರಾಥಮಿಕ ವರದಿಯಲ್ಲಿ 24 ಕೋಟಿ ರು.ಗಳಷ್ಟುಹಾನಿಯಾಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ. ಆದರೆ ಅನುದಾನ ಬಂದಿಲ್ಲದ ಕಾರಣ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಕೂಡಲೇ ಅನುದಾನದ ಹಣವನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಕೇಳಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ಸೋಮಶೇಖರ್, ರಮೇಶ್, ಗಿರೀಶ್, ಪುಟ್ಟಬಸವ, ಹುಚ್ಚಪ್ಪ, ಸಕಲಆರಾಧ್ಯ, ನಾಗರಾಜು, ರಾಮಕೃಷ್ಣ, ಬೀರೇಶ್, ನಾಗಣ್ಣ, ಸುರೇಶ್, ಲೋಕೋಪಯೋಗಿ ಎಇಇ ಕೆ.ಜೆ. ಶಿವಣ್ಣ, ಎಇ ಓಬಯ್ಯ, ಗ್ರಾಮದ ಮುಖಂಡರು ಇದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕಿನ ಆರ್‌ಡಿಪಿಆರ್ ಇಲಾಖೆಗೆ ಬಿಡುಗಡೆಯಾಗಿದ್ದ 8 ಕೋಟಿಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಜನವರಿ 2019 ರಲ್ಲಿ 21 ರಸ್ತೆಗಳ ಅಭಿವೃದ್ಧಿಗಾಗಿ 45 ಕೋಟಿ ಹಣವನ್ನು ಕಳೆದ 10 ದಿನಗಳ ಹಿಂದೆ ಸರ್ಕಾರ ತಡೆ ಹಿಡಿದಿತ್ತು. ತಾಲೂಕಿನ ಎಸ್‌ಇಪಿ- ಟಿಎಸ್‌ಪಿ ಯೋಜನೆಯಡಿ 65 ಕೋಟಿ ಹಣ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿ ಮತ್ತೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ತಿಳಿಸಿದ್ದಾರೆ. ತಾಲೂಕು ನಂಜುಂಡಪ್ಪ ವರದಿ ಆಧಾರದಲ್ಲಿ ಹಿಂದುಳಿದ ತಾಲೂಕು ಆಗಿದ್ದು ಇದರಿಂದ ಅಬಿವೃದ್ಧಿ ಕುಂಠಿತವಾಗಲಿದೆ. ಕೂಡಲೇ ಸರ್ಕಾರ ತಾಲೂಕಿಗೆ ಈ ಹಿಂದೆ ಬಂದಿರುವ, ಬಿಡುಗಡೆಯಾಗಿರುವ ಹಣವನ್ನು ಹಿಂದಕ್ಕೆ ಪಡೆಯದೇ ನೀಡಬೇಕು. ಮಳೆಯಿಂದ ಹಾನಿಯಾಗಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸರ್ಕಾರವನ್ನು ಒತ್ತಾಯಿಸಿದರು.