ಬಿಜೆಪಿಯು ಇದೀಗ ವಿಶ್ವದಾಖಲೆಯನ್ನು ಬರೆಯುವ ಮಟ್ಟದಲ್ಲಿ ಸಮಾವೇಶವೊಂದನ್ನು ನಡೆಸಿದೆ. ಭೋಪಾಲ್ ನಲ್ಲಿ ನಡೆದ ರ್ಯಾಲಿಯಲ್ಲಿ ಅತ್ಯಧಿಕ ಸಂಖ್ಯೆಯ ಕಾರ್ಯ ಕರ್ತರು ಭಾಗಿಯಾಗಿದ್ದು ಒಂದು ದಾಖಲೆ ಬರೆದಿದೆ. 

ಭೋಪಾಲ್: ಭೋಪಾಲದಲ್ಲಿ ಮಂಗಳವಾರ ವಿಶ್ವದಾಖಲೆಯ ಸಮಾವೇಶವನ್ನು ಬಿಜೆಪಿಯು ನಡೆಸಿತು. ಪ್ರಧಾನಿ, ಮೋದಿ, ಅಮಿತ್ ಶಾ ಭಾಗವಹಿಸಿದ್ದ ರ್ಯಾಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ವಿಶ್ವ ದಾಖಲೆ ಬರೆದಿದ್ದಾರೆ. 

ಬಿಜೆಪಿ ಕಾರ‍್ಯಕರ್ತರ ಮಹಾಕುಂಭ ವಿಶ್ವದಾಖಲೆ ಪ್ರಮಾಣದ್ದು ಎಂದು ಬಿಜೆಪಿ ಹೇಳಿಕೊಂಡಿದೆ. 

ಈ ರಾರ‍ಯಲಿಯಲ್ಲಿ 230 ವಿಧಾನಸಭಾ ಕ್ಷೇತ್ರಗಳ 65000 ಮತಗಟ್ಟೆವ್ಯಾಪ್ತಿಯ 13 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.