ಅಪರಾಧಿಗಳು ಯಾವುದೇ ಯೋಜಿತವಿಲ್ಲದೆ ಆಕಸ್ಮಿಕವಾಗಿ ಈ ಅಪರಾಧ ಮಾಡಿದ್ದು, ಅದಲ್ಲದೆ ಇಲ್ಲಿಯವರೆಗೂ ಜೈಲುವಾಸ ಅನುಭವಿಸಿದ ಸಂದರ್ಭದಲ್ಲಿ ಉತ್ತಮ ನಡತೆ ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ 7 ವರ್ಷಗಳ ಕಾಲ ಶಿಕ್ಷೆ ವಿಧಿಸಬೇಕೆಂದು ಆರೋಪಿ ಪರ ವಕೀಲರು ಕೋರ್ಟ್'ಗೆ ತಿಳಿಸಿದ್ದಾರೆ.
ನವದೆಹಲಿ(ಮಾ.19): ಮಾರುತಿ ಕಾರು ತಯಾರಿಕಾ ಸಂಸ್ಥೆಯಲ್ಲಿ 2012ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳೆಂದು ಸಾಬೀತಾದ 13 ಮಂದಿ ಮಾಜಿ ನೌಕಕರಿಗೆ ಗುರಗಾಂವ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗಳು ಯಾವುದೇ ಯೋಜಿತವಿಲ್ಲದೆ ಆಕಸ್ಮಿಕವಾಗಿ ಈ ಅಪರಾಧ ಮಾಡಿದ್ದು, ಅದಲ್ಲದೆ ಇಲ್ಲಿಯವರೆಗೂ ಜೈಲುವಾಸ ಅನುಭವಿಸಿದ ಸಂದರ್ಭದಲ್ಲಿ ಉತ್ತಮ ನಡತೆ ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ 7 ವರ್ಷಗಳ ಕಾಲ ಶಿಕ್ಷೆ ವಿಧಿಸಬೇಕೆಂದು ಆರೋಪಿ ಪರ ವಕೀಲರು ಕೋರ್ಟ್'ಗೆ ತಿಳಿಸಿದ್ದಾರೆ.
ಆದರೆ ಕೋರ್ಟ್ ಇವರ ವಾದವನ್ನು ಮಾನ್ಯ ಮಾಡಲಿಲ್ಲ. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. 2012ರ ಆಗಸ್ಟ್'ನಲ್ಲಿ ನಡೆದ ಗಲಭೆಯಲ್ಲಿ ಸಂಸ್ಥೆಯ ಹಿರಿಯ ಮಾನವ ಸಂಸ್ಥೆ ಅಧಿಕಾರಿ ಸೇರಿದಂತೆ ಕೆಲವರು ಕೊಲೆಯಾಗಿ ಹಲವು ಮಂದಿ ಗಾಯಗೊಂಡಿದ್ದರು. ಗುರಗಾಂವ್ ಕೋರ್ಟ್ ಮಾರ್ಚ್ 10 ರಂದು ತೀರ್ಪು ನೀಡಿಪ್ರಕರಣದಲ್ಲಿ 117 ಮಂದಿಯನ್ನು ಖುಲಾಸೆಗೊಳಿಸಿ 31 ಮಂದಿ ಅಪರಾಧಿ ಎಂದು ಘೋಷಿಸಿತ್ತು.