ಗಿರ್ ಅರಣ್ಯ ಅರಣ್ಯ ಪ್ರದೇಶದಲ್ಲಿ 10 ದಿನದಲ್ಲಿ 12 ಸಿಂಹಗಳು ಮೃತಪಟ್ಟಿದ್ದು ಈ ಸಂಬಂಧ ಸರ್ಕಾರ ತನಿಖೆಗೆ ಆದೇಶ ನೀಡಿದೆ. 

ರಾಜ್ ಕೋಟ್ : ಕೇವಲ 10 ದಿನದಲ್ಲಿ 12 ಸಿಂಹಗಳು ಮೃತಪಟ್ಟ ಘಟನೆ ಗುಜರಾತ್ ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಸಿಂಹಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕಾದಾಟ ಹೆಚ್ಚಾಗಿದ್ದು ಇದರಿಂದ ಮೃತಪಟ್ಟಿವೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಗಿರ್ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ 12 ಸಿಂಹಗಳಲ್ಲಿ 6 ಮರಿಗಳಾಗಿವೆ ಎಂದು ಡೆಪ್ಯುಟಿ ಕನ್ಸರ್ವೇಟರ್ ಪಿ. ಪುರುಷೋತ್ತಮ್ ಹೇಳಿದ್ದಾರೆ. 

ಒಂದಕ್ಕೊಂದು ಕಾದಾಡಿಕೊಂಡೆ ಇಲ್ಲಿ ಸಿಂಹಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ. ಕಳೆದ 10 ದಿನಗಳಲ್ಲಿ 12 ಸಿಂಹಗಳು ಸಾವನ್ನ ಪ್ಪಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಬೇರೆ ಬೇರೆ ಪ್ರದೇಶಗಳಲ್ಲಿ ಸಿಂಹಗಳ ಶವ ಸಿಕ್ಕಿದ್ದು 2 ಸಿಂಹಗಳ ಮೃತದೇಹ ಈಗಾಗಲೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಅಲ್ಲದೇ ಈಗಾಗಲೇ ಸಿಂಹಗಳ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು , ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. 

ಈಗಾಗಲೇ ರಾಜ್ಯ ಸರ್ಕಾರ ಸಿಂಹಗಳ ಸಾವಿನ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದು , ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ಹೇಳಿದ್ದಾರೆ.