ಕಳೆದ ರಾತ್ರಿ ರಾಮೇಶ್ವರಂನಲ್ಲಿ 634 ಬೋಟ್'ಗಳಲ್ಲಿ 3,500 ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕಿಳಿದಿದ್ದಾರೆ ಎಂದು ವರದಿಯಾಗಿದೆ

ಕೊಲಂಬೋ(ನ.20): ಅಕ್ರಮವಾಗಿ ಲಂಕಾ ಜಲ ಗಡಿ ಪ್ರವೇಶಿಸಿದ್ದಾರೆ ಎಂಬ ಆರೋಪದಡಿ 11 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಸೇನೆ ಸ್ಪಷ್ಟಪಡಿಸಿದೆ.

ತಮಿಳುನಾಡಿನ ರಾಮೇಶ್ವರಂ ಮೂಲದ ಮೀನುಗಾರರು ಲಂಕಾ ಸಮೀಪದ ನೆಡೂಂತೀವು ದ್ವೀಪದ ಬಳಿ ಅಕ್ರಮವಾಗಿ ಜಲಗಡಿ ಪ್ರವೇಶಿಸಿದ್ದೂ ಅಲ್ಲದೇ, ಅಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಶ್ರೀಲಂಕಾ ಕರಾವಳಿ ಕಾವಲು ಪಡೆ ಆರೋಪಿಸಿದೆ.

ಕಳೆದ ರಾತ್ರಿ ರಾಮೇಶ್ವರಂನಲ್ಲಿ 634 ಬೋಟ್'ಗಳಲ್ಲಿ 3,500 ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕಿಳಿದಿದ್ದಾರೆ ಎಂದು ವರದಿಯಾಗಿದೆ.