ಮದ್ದೂರು/ಭಾರತೀನಗರ (ಫೆ.09): ರೌಡಿ ಶೀಟರ್ ಅಶೋಕ್ ಪೈ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಗುರುವಾರ ೧೧ ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮದ್ದೂರು/ಭಾರತೀನಗರ (ಫೆ.09): ರೌಡಿ ಶೀಟರ್ ಅಶೋಕ್ ಪೈ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಗುರುವಾರ ೧೧ ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಡ್ಯದ ಮರೀಗೌಡ ಬಡಾವಣೆಯ ಎನ್. ರಾಘವೇಂದ್ರ ಅಲಿಯಾಸ್ ಗುರು (29), ಬೇವುಕಲ್ಲು ಗ್ರಾಮದ ಎನ್.ಮೋಹನ್ ಕುಮಾರ್ (34), ನಾಗರಾಜು ಅಲಿಯಾಸ್ ನಾಗ (21), ಕಲ್ಲಹಳ್ಳಿಯ ಸಿ.ಚೇತನ್ ಕುಮಾರ್ ಅಲಿಯಾಸ್ ಕಲ್ಲಹಳ್ಳಿ ಚೇತ (35), ಮೊತ್ತಹಳ್ಳಿ ಗ್ರಾಮದ ಎನ್.ಮನು (25), ಮೈಸೂರಿನ ಹೂಟಗಹಳ್ಳಿ ನಿವಾಸಿ ಸಿ.ಅನಿಸ್ ಗೌಡ ಅಲಿಯಾಸ್ ಅನಿ (21), ಕೋಣನಹಳ್ಳಿ ತಿಟ್ಟಿನ ಎಂ. ಜಿ. ಬಡಾವಣೆ ವಾಸಿ ಸಿ.ನಂದೀಶ (25), ಎಚ್.ಎ. ಭೈರವ ಅಲಿಯಾಸ್ ಕುಂಬಿ (23), ಶ್ರೀರಂಗಪಟ್ಟಣದ ರಂಗನಾಥ ನಗರದ ಎಂ.ಸೋಮ (38), ಮಂಡ್ಯ ಶಂಕರಮಠದ ಅಜ್ಮಲ್ ಪಾಷ ಅಲಿಯಾಸ್ ಅಜ್ಜು (21), ರಾಮನಗರ ಜಿಲ್ಲೆ ಚನ್ನಪಟ್ಟಣ ಕುವೆಂಪುನಗರದ ಧನು (22) ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಮೋಟಾರ್ ಸೈಕಲ್, ಅಪಾಯಕಾರಿ ಆಯುಧಗಳಾದ ಲಾಂಗ್, ಡ್ರ್ಯಾಗರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
500, 100 ರು.ಗಳ ಹಳೇನೋಟುಗಳ ಬದಲಿಗೆ ಹೊಸ ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ನಂಬಿಸಿ 10 ಲಕ್ಷಕ್ಕೂ ಅಧಿಕ ಹಣ ಪಡೆದ ಅಶೋಕ್ ಪೈ, ಹಣ ನೀಡದೆ ವಂಚಿಸಿದ್ದರಿಂದಲೇ ಆತನ ಕೊಲೆಗೆ ಸಂಚು ರೂಪಿಸಿದ್ದಾಗಿ ಆರೋಪಿಗಳು ವಿಚಾರಣೆ ಸಮಯದಲ್ಲಿ ಬಾಯ್ಬಿಟ್ಟಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
