ಡಲ್ಲಾಸ್(ಆ.31)  ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಹೊಸ ಧ್ಯೇಯ ವಾಕ್ಯವನ್ನು ಕೂಡ ರೂಪಿಸಲಾಗಿದ್ದು, "ಅಕ್ಕರೆಯ ಹತ್ತರ ಸಾರ್ಥಕ ಹೊತ್ತು" ಎಂಬ ಘೋಷ ವಾಕ್ಯದಡಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ.

ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್ ನಗರದಲ್ಲಿ ಈ ಬಾರಿ 10ನೇ ವಿಶ್ವ ಅಕ್ಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿಯಾಗಿ ಆರಂಭವಾಗಿದೆ.

ಇಂದಿನಿಂದ 3 ದಿನ ಅಕ್ಕ ಸಮ್ಮೇಳನ, ಅಮೆರಿಕದಲ್ಲಿ ಕನ್ನಡದ ಮನ

ಡಲ್ಲಾಸ್ ನಗರದ ಶೆರಟನ್ ಕನ್ವೆನ್ ಷನ್ ಸೆಂಟರ್ ನಲ್ಲಿ ಕನ್ನಡದ ಮನಗಳು ಒಂದಾಗಿವೆ. ಅಕ್ಕ ಸಮ್ಮೇಳನಕ್ಕೆ ಸ್ವಾಗತ ಕೋರಲು ರಚಿಸಿರುವ ಗೀತೆ ಕೂಡ ಅಷ್ಟೆ ಮನ ತಣಿಸುವಂತೆ ಇದೆ. ವಿಶ್ವೇಶ ಭಟ್ ಅವರ ಗಾಯನ ಸಾರಥ್ಯದಲ್ಲಿ ಮೂಡಿ ಬಂದಿರುವ ಗೀತೆಯನ್ನು ಒಮ್ಮೆ ಕೇಳಲೇಬೇಕು.