ನಾರಿಮನ್ ಸ್ವಯಂಪ್ರೇರಿತ ವಿವೇಚನೆಯಿಂದಲೇ ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದಾರೆ

ಬೆಂಗಳೂರು(ಸೆ.07): ತಮಿಳುನಾಡಿಗೆ 10 ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದು ನಾರಿಮನ್ ನಿರ್ಧಾರ, ನಾರಿಮನ್ ಸ್ವಯಂಪ್ರೇರಿತ ವಿವೇಚನೆಯಿಂದಲೇ ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನೀರು ಬಿಡುಗಡೆ ಅಫಿಡವಿಟ್​ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇರಲಿಲ್ಲ ಎಂದು ಸುವರ್ಣ ನ್ಯೂಸ್​ ವಿಶೇಷ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ್ ಒಪ್ಪಿಕೊಂಡಿದ್ದಾರೆ.

ಇದು 32 ವರ್ಷಗಳಿಂದ ನಡೆದುಕೊಂಡೇ ಬರುತ್ತಿದೆ, ಇತರೆ ಸರ್ಕಾರಗಳು ನೀಡಿದ ರೀತಿಯೇ ನಾರಿಮನ್ ಅವರಿಗೆ ನಮ್ಮ ಸರ್ಕಾರವೂ ಸ್ವಾತಂತ್ರ್ಯ ನೀಡಿದೆ. 10 ಸಾವಿರ ಕ್ಯುಸೆಕ್ ನೀರು ಬಿಡುವ ವಿಚಾರ ನಾರಿಮನ್ ನಿರ್ಧಾರ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.