ಇತ್ತೀಚೆಗೆ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಆ ಕಾರ್ಯಕ್ರಮಕ್ಕೆ ಬಂದವರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕೊಪ್ಪಳ(ಸೆ.29): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಉಳಿದಿದ್ದ ಹಳಸಿದ ಅನ್ನ ಸೇವಿಸಿ ನೂರು ಕುರಿಗಳು ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಆ ಕಾರ್ಯಕ್ರಮಕ್ಕೆ ಬಂದವರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಉಳಿದ ಆಹಾರವನ್ನು ಬಯಲಲ್ಲಿ ಎಸೆಯಲಾಗಿತ್ತು. ಈ ಆಹಾರವನ್ನು ಸೇವಿಸಿ ಬೆಳಗಾವಿ ಜಿಲ್ಲೆ ಶಿರಗಾಂವ್‌ನ ಸೋಣ್ಣ ಪೂಜಾರ ಅವರ ೫೦, ಅಣಪ್ಪ ಪೂಜಾರ್ ಅವರ 30 ಹಾಗೂ ಫಕೀರಪ್ಪ ಅವರ 20 ಕುರಿಗಳು ಮೃತಪಟ್ಟಿವೆ.
ಇನ್ನೂ ಹಲವು ಕುರಿಗಳು ಅಸ್ವಸ್ಥಗೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಶಿವಣ್ಣ ಅವರು, ವಿಷಪೂರಿತ ಆಹಾರ ಸೇವಿಸಿಯೇ ಕುರಿಗಳು ಮೃತಪಟ್ಟಿವೆ ಎಂದಿದ್ದಾರೆ.
