ಮೊದಲ ಹಂತದಲ್ಲಿ ಬೆಂಗಳೂರು, ದೆಹಲಿ, ಭೋಪಾಲ್ನಲ್ಲಿ ಈ ಕೋರ್ಸ್ ಆರಂಭಿಸಲಾಗುವುದು.
ಭೋಪಾಲ್(ಜು.04): ಜಿಎಸ್'ಟಿ ಜಾರಿಯಾಗಿ ಮೂರು ದಿನ ಕಳೆದರೂ, ಬಳಕೆದಾರರಿಗೆ ಅದರ ಕುರಿತ ಗೊಂದಲಗಳು ಮೊದಲಿನಂತೆಯೇ ಉಳಿದುಕೊಂಡಿದೆ. ಹೀಗಾಗಿ ಗೊಂದಲ ನಿವಾರಿಸಲು ಜಿಎಸ್ಟಿ ಕುರಿತ 100 ಗಂಟೆಗಳ ಕೋರ್ಸ್ ಆರಂಭಿಸಲು ಕೇಂದ್ರಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಸಚಿವಾಲಯ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ದೆಹಲಿ, ಭೋಪಾಲ್ನಲ್ಲಿ ಈ ಕೋರ್ಸ್ ಆರಂಭಿಸಲಾಗುವುದು. ಜುಲೈ 15ರಿಂದ ಆರಂಭವಾಗಲಿರುವ ಕೋರ್ಸ್'ನಲ್ಲಿ ಯಾವುದೇ ಪದವೀಧರರು ಭಾಗಿಯಾಗಬಹುದಾಗಿದೆ. ಇದರಲ್ಲಿ ನೂತನ ಜಿಎಸ್'ಟಿ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಬಳಿಕ ಭಾಗಿಯಾದವರಿಗೆ ಸರ್ಟಿಫಿಕೇಟ್ ನೀಡಲಾಗುವುದು.
