ಅನೇಕರು ಹಾಜರಿ ಹಾಕಿ ಲಾಂಜ್ ನಲ್ಲಿ ಹರಟೆ ಹೊಡೆದವರು ಇದ್ದಾರೆ. ಇದ್ರಲ್ಲಿ 10 ಮಂದಿ ಶಾಸಕರು ಅಧಿವೇಶನದತ್ತ ಮುಖ ಮಾಡಿ ನೋಡಲಿಲ್ಲ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಗೈರು ಹಾಜರಾತಿಯ ಎದ್ದು ಕಾಣುತ್ತಿತ್ತು. 224 ಶಾಸಕರಿರುವ ವಿಧಾನ ಸಭೆಯಲ್ಲಿ ಹಾಜರಿ ಹಾಕಿದವರ ಸಂಖ್ಯೆ ಪ್ರತಿ ದಿನ 120 ದಾಟಿರಲಿಲ್ಲ. ಅನೇಕರು ಹಾಜರಿ ಹಾಕಿ ಲಾಂಜ್ ನಲ್ಲಿ ಹರಟೆ ಹೊಡೆದವರು ಇದ್ದಾರೆ. ಇದ್ರಲ್ಲಿ 10 ಮಂದಿ ಶಾಸಕರು ಅಧಿವೇಶನದತ್ತ ಮುಖ ಮಾಡಿ ನೋಡಲಿಲ್ಲ. ಅವರು ಯಾರ್ಯಾರು ಎಂದ್ರೆ, ಮಂಡ್ಯ ಶಾಸಕ ಅಂಬರೀಶ್, ಹೊಸಪೇಟೆಯ ಆನಂದ್ ಸಿಂಗ್, ಬೀದರ್ ನ ಅಶೋಕ್ ಖೇಣಿ, ಗುರುಮಿಟ್ಕಲ್ ನ ಬಾಬುರಾವ್ ಚಿಂಚನಸೂರು, ಕಲಬುರಗಿ ಉತ್ತರ ವಿಭಾಗದ ದತ್ತಾತ್ರೆಯ ಪಾಟೀಲ್, ಹಾನಗಲ್ ಶಾಸಕ ಮನೋಹರ್ ತಹಸೀಲ್ದಾರ್, ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ, ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್, ಬೇಲೂರು ಶಾಸಕ ರುದ್ರೇಶ್ ಗೌಡ , ಕಂಪ್ಲಿ ಶಾಸಕ ಸುರೇಶ್ ಬಾಬ್ . ಒಟ್ಟಾರೆ, ವಿಧಾನ ಮಂಡಲದ ಸುಗಮ ಕಲಾಪ ನಡೆಸಲು ಸ್ಪೀಕರ್ ನಿಯಮಾವಳಿಗೆ ತಿದ್ದುಪಡಿ ತಂದಿದ್ದರೂ ಶಾಸಕರ ಹಾಜರಾತಿಯನ್ನು ಹೆಚ್ಚಿಸಲು ಮಾತ್ರ ಸಾಧ್ಯವಾಗಿಲ್ಲ.