ಬೆಂಗಳೂರು[ಜು. 07]  ರಾಜೀನಾಮೆ ನೀಡಿರುವ 14 ಶಾಸಕರಿಗೂ ದೋಸ್ತಿಗಳು ಸಚಿವ ಸ್ಥಾನದ ಆಫರ್ ನೀಡಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದೆ.  ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತು ಎಂಬಂತೆ ದೋಸ್ತಿ ನಾಯಕರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಅತೃಪ್ತರ ರಾಜೀನಾಮೆ ಹಿನ್ನೆಲೆಯಲ್ಲಿ ದೋಸ್ತಿಗಳ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು 10 ಸಚಿವರ ಪದತ್ಯಾಗಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಸಿನ 5 ಸಚಿವರು, ಜೆಡಿಎಸ್ ನ 5 ಜನ ಸಚಿವರು ಸ್ಥಾನ ತ್ಯಾಗಕ್ಕೆ ಸಿದ್ಧರಾಗಿದ್ದಾರೆ.

ದೋಸ್ತಿಗಳ ಅಚ್ಚರಿ ತೀರ್ಮಾನ: ಸಿದ್ದರಾಮಯ್ಯ ಮತ್ತೆ ಸಿಎಂ?

ಕಾಂಗ್ರೆಸ್ ನಿಂದ  ಸಚಿವರಾದ ಯು.ಟಿ. ಖಾದರ್, ಕೃಷ್ಣಭೈರೇಗೌಡ, ಕೆ.ಜೆ. ಜಾರ್ಜ್, ಆರ್.ವಿ.ದೇಶಪಾಂಡೆ, ಶಿವಶಂಕರರೆಡ್ಡಿ ರಾಜೀನಾಮೆ ನೀಡುವುದು ಪಕ್ಕಾ ಆಗಿದ್ದರೆ ಜೆಡಿಎಸ್ ನಿಂದ ಸಾ.ರಾ.ಮಹೇಶ್, ಪುಟ್ಟರಾಜು ಸ್ಥಾನ ತ್ಯಾಗ ಮಾಡಲಿದ್ದು ಇನ್ನು ಮೂವರು ಜೆಡಿಎಸ್ ಸಚಿವರ ಹೆಸರು ತಿಳಳಿದು ಬಂದಿಲ್ಲ.  ಸಿದ್ದರಾಮಯ್ಯ- ಸಿಎಂ ಕುಮಾರಸ್ವಾಮಿ ದೂರವಾಣಿಯಲ್ಲಿ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.