ಬೆಂಗಳೂರು : ಮುಖ್ಯಮಂತ್ರಿ  ಕುಮಾರಸ್ವಾಮಿ ಆಪ್ತ ವಲಯದ ಅಧಿಕಾರಿಗಳಿಗೆ ಮಣೆ ಹಾಕಲಾಗಿದ್ದು, ಬೀದರ್ ಜಿಲ್ಲೆ Spಯಾಗಿದ್ದ ಡಿ.ದೇವರಾಜ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ವಲಯದ DCPಯಾಗಿ ಡಿ.ದೇವರಾಜ್ ಗೆ ಸ್ಥಾನ ನೀಡಲಾಗಿದೆ.  

ದಾವಣಗೆರೆಯಲ್ಲಿದ್ದ ಕೆ.ವಿ.ಶರತ್ ಚಂದ್ರ ಅವರನ್ನು ಈಗ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ದಕ್ಷಿಣ ವಲಯದ IGPಯಾಗಿ  ನೇಮಿಸಲಾಗಿದೆ.   

ಇದೇ ಸಂದರ್ಭದಲ್ಲಿ ಒಟ್ಟು 10 ಮಂದಿ IPS ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. 

ಡಾ.ಅಲಿಕಾನ ಎಸ್ ಮೂರ್ತಿ  - ADGP, ಮಾನವ ಹಕ್ಕು ಆಯೋಗ


ಬೆಂಗಳೂರು ಅರಣ್ಯ ದಳ ಕಚೇರಿ ಎಡಿಜಿಪಿಯಾಗಿರುವ ಡಾ.ಮೂರ್ತಿ ವರ್ಗ

ಎಸ್.ಮುರುಗನ್ - ಐಜಿಪಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು

ಕೆ.ವಿ.ಶರತ್ ಚಂದ್ರ - ಐಜಿಪಿ, ದಕ್ಷಿಣ ವಲಯ, ಮೈಸೂರು

ಮನೀಶ್ ಕರ್ಬೀಕರ್ - ಐಜಿಪಿ, ಈಶಾನ್ಯ ವಲಯ, ಕಲಬುರಗಿ

ಸೌಮೇಂದು ಮುಖರ್ಜಿ - ಐಜಿಪಿ, ಆಂತರಿಕ ಭದ್ರತೆ, ಬೆಂಗಳೂರು

ಎಂ.ಚಂದ್ರಶೇಖರ್ - ಐಜಿಪಿ, SIT, ಲೋಕಾಯುಕ್ತ, ಬೆಂಗಳೂರು

ಭ್ರಷ್ಟಾಚಾರ ನಿಗ್ರಹ ದಳ (ACB) ಐಜಿಪಿಯಾಗಿರುವ ಚಂದ್ರಶೇಖರ್

H.S.ರೇವಣ್ಣ - DIGP, ಪೊಲೀಸ್ ಫೈರ್ ಸರ್ವೀಸಸ್, ಬೆಂಗಳೂರು

ಡಾ.ಚಂದ್ರಗುಪ್ತಾ - ಡಿಸಿಪಿ, ಟ್ರಾಫಿಕ್, ಬೆಂಗಳೂರು ಪಶ್ಚಿಮ ವಲಯ

ಡಿ.ದೇವರಾಜ್ - ಡಿಸಿಪಿ, ಬೆಂಗಳೂರು ಕೇಂದ್ರ ವಲಯ

ಟಿ.ಶ್ರೀಧರ - ಬೀದರ್ ಜಿಲ್ಲೆ ಎಸ್ಪಿ