Asianet Suvarna News Asianet Suvarna News

ಕೇವಲ ಒಬ್ಬನೇ ತೆರಿಗೆದಾರ ದೇಶದ ಶೇ. 11 ರಷ್ಟು ಜನರ ತೆರಿಗೆ ಪಾವತಿಸಬೇಕು

ಶೇ. 1 ರಷ್ಟು ಮಂದಿ ಭಾರತೀಯರು ಭಾರತದ ಸಂಪತ್ತಿನ ಶೇ. 58 ರಷ್ಟು ಆಸ್ತಿ ಹೊಂದಿದ್ದರೆ, 57 ಶತಕೋಟ್ಯದೀಶರ ಬಳಿ ದೇಶದ 70 ರಷ್ಟು ಮಂದಿಯ ಬಳಿಯಿರುವಷ್ಟು ಸಂಪತ್ತು ಇದೆ. 2010ರಲ್ಲಿ  388 ಮಂದಿ ಶತ ಕೋಟ್ಯದೀಶರು ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಬಡ ಜನರ ಬಳಿಯಿರುವಷ್ಟು ಆಸ್ತಿ ಹೊಂದಿದ್ದರು. 2015ರ ವೇಳೆಗೆ ಅದು 64 ಮಂದಿಗೆ ಸಮನಾಗಿದೆ.

1 Taxpayer Owes 11 Of Indias Individual Income Tax In 2015

ನವದೆಹಲಿ(ಜ.24): ಒಬ್ಬನೇ ತೆರಿಗೆದಾರ 2014-15ನೇ ಸಾಲಿನಲ್ಲಿ ಭಾರತ ದೇಶದ ಶೇ.11 ರಷ್ಟು ಜನರ ತೆರಿಗೆ ಪಾವತಿಸಬೇಕು. ಅಂದರೆ ಈತ 21,870 ಕೋಟಿ ರೂ. ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈತನ ಹೆಸರನ್ನು ಇಲಾಖೆಯು ಬಹಿರಂಗಗೊಳಿಸಿಲ್ಲ.ಮೂರು ತೆರಿಗೆದಾರರು ತಮ್ಮ ವ್ಯವಹಾರದ ತೆರಿಗೆ ಆದಾಯವನ್ನು 500 ಕೋಟಿ ರೂ.ಗೂ ಹೆಚ್ಚು ಎಂದು ಘೋಷಿಸಿಕೊಂಡಿದ್ದಾರೆ.

ಶೇ. 1 ರಷ್ಟು ಮಂದಿ ಭಾರತೀಯರು ಭಾರತದ ಸಂಪತ್ತಿನ ಶೇ. 58 ರಷ್ಟು ಆಸ್ತಿ ಹೊಂದಿದ್ದರೆ, 57 ಶತಕೋಟ್ಯದೀಶರ ಬಳಿ ದೇಶದ 70 ರಷ್ಟು ಮಂದಿಯ ಬಳಿಯಿರುವಷ್ಟು ಸಂಪತ್ತು ಇದೆ. 2010ರಲ್ಲಿ  388 ಮಂದಿ ಶತ ಕೋಟ್ಯದೀಶರು ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಬಡ ಜನರ ಬಳಿಯಿರುವಷ್ಟು ಆಸ್ತಿ ಹೊಂದಿದ್ದರು. 2015ರ ವೇಳೆಗೆ ಅದು 64 ಮಂದಿಗೆ ಸಮನಾಗಿದೆ.

ಭಾರತದ 3.6 ಕೋಟಿಯಷ್ಟು ತೆರಿಗೆದಾರರು 16.5 ಲಕ್ಷ ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಅವರು 1.91 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದ್ದು, ಇದು ಕಳೆದ ಆರ್ಥಿಕ ವರ್ಷಕ್ಕಿಂತ ಕ್ರಮವಾಗಿ ಶೇ.23 ರಿಂದ ಶೇ.37 ರಷ್ಟು ಹೆಚ್ಚಾಗಿದೆ. 2014-15ರಲ್ಲಿ 3.6 ಕೋಟಿ ಭಾರತೀಯರು 9.8 ಲಕ್ಷ ಕೋಟಿ ರೂ. ವೇತನದಿಂದ ಬರುವ ಆದಾಯವೆಂದು ಘೋಷಿಸಿಕೊಂಡಿದ್ದು, ಇದು ಈ ವರ್ಷದ ಶೇ.7 ರಷ್ಟು ನಿವ್ವಳ ರಾಷ್ಟ್ರೀಯ ಆದಾಯಕ್ಕೆ ಸಮನಾಗಿದೆ. ವ್ಯವಹಾರಿಕ ಆದಾಯವು 5.6 ಲಕ್ಷ ಕೋಟಿಯಷ್ಟಿದ್ದರೆ ಇತರ ಮೂಲಗಳಿಂದ ಆದಾಯವು 2.4 ಲಕ್ಷ ಕೋಟಿಯಷ್ಟಿದೆ.

2000-01 ರಲ್ಲಿ ಆದಾಯ ತೆರಿಗೆ ಸಂಗ್ರಹ 31,764 ಕೋಟಿಯಷ್ಟಿದ್ದು, 2015-16 ಆರ್ಥಿಕ ವರ್ಷದಲ್ಲಿ 2.9 ಲಕ್ಷ ಕೋಟಿಗೆ ಏರಿಗೆಯಾಗಿದೆ. ಇದು 9 ಬಾರಿಯಷ್ಟು ಏರಿಕೆಗೆ ಸಮನಾಗಿದೆ.

Follow Us:
Download App:
  • android
  • ios