ನವದೆಹಲಿ(ಸೆ.30): ಉರಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತದ ಮತ್ತೋರ್ವ ಸೈನಿಕ ಅಸುನೀಗಿದ್ದಾನೆ. ಹೀಗಾಗಿ ಉರಿ ದಾಳಿಯಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ 19ಕ್ಕೆ ಏರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಯಗೊಂಡಿದ್ದ ಯೋಧ ನಾಯಕ್ ರಾಜ್ ಕಿಶೋರ್ ಸಿಂಗ್ ಆರ್ಮಿ ರಿಸರ್ಚ್ ಆ್ಯಂಡ್ ರೆಪ್ರರಲ್ ಹಾಸ್ಪಿಟಲ್'ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಭಾರತದ ಉರಿ ಎಂಬ ಸೇನಾ ನೆಲೆಯ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ಸೆಪ್ಟಂಬರ್ 18ರಂದು ದಾಳಿ ನಡೆಸಿ 18 ಸೈನಿಕರನ್ನು ಹತ್ಯೆ ಮಾಡಿದ್ದರು.

ಇದಕ್ಕೆ ಪ್ರತಿಕಾರವೆಂಬಂತೆ ಭಾರತದ ಸೈನಿಕರು ಸೆಪ್ಟೆಂಬರ್ 28 ಹಾಗೂ 29 ರ ಮಧ್ಯರಾತ್ರಿ ಭಾರತದ ಗಡಿನಿಯಂತ್ರಣ ರೇಖೆಯನ್ನು ದಾಟಿ ಏಳು ಭಯೋತ್ಪಾದಕ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ 40 ಉಗ್ರರನ್ನು ಹೊಡೆದುರುಳಿಸಿದ್ದಾರೆ.