ಚೆನ್ನೈ: ಪೆಟ್ರೋಲ್‌ ಬೆಲೆ ಗಗನಕ್ಕೇರಿದ ಮೇಲೆ ಅದನ್ನು ಉಡುಗೊರೆಯಾಗಿ ನೀಡುವುದು ಹೊಸ ಸಂಪ್ರದಾಯವಾಗಿದೆ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನವದಂಪತಿಗೆ, ಸ್ನೇಹಿತರು 5 ಲೀಟರ್‌ ಪೆಟ್ರೋಲ್‌ ನೀಡಿ ಸುದ್ದಿಯಾಗಿದ್ದರು. 

ಇದೀಗ ತಮಿಳುನಾಡಿನ ಚೆನ್ನೈನ ಬೇಕರಿ ಮಾಲೀಕರೊಬ್ಬರು 499 ರು.ನ ಒಂದು ಕೆಜಿ ಕೇಕ್‌ ಖರೀದಿ ಮಾಡಿದವರಿಗೆ 1 ಲೀ.ಪೆಟ್ರೋಲ್‌ ಉಚಿತ ನೀಡುವುದಾಗಿ ಘೋಷಿಸಿ ಜನರನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ಅಲ್ಲದೇ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್ ನಲ್ಲಿ ಈ ವಿಶೇಷ ಕೊಡುಗೆ ನೀಡಲಾಗಿತ್ತು. ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು.