ಬೆಂಗಳೂರು: ಸಾರಿಗೆ ಇಲಾಖೆಯು ಬೆಂಗಳೂರು ದಕ್ಷಿಣ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಆರಂಭಿಸಿರುವ ‘ಕೆಎ-05 ಎಂಜಡ್‌’ ಸರಣಿಯ ಮುಂಗಡ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜಿನಲ್ಲಿ 0001 ಸಂಖ್ಯೆ .6.66 ಲಕ್ಷ ಭರ್ಜರಿ ಮೊತ್ಕಕ್ಕೆ ಬಿಕರಿಯಾಯಿತು.

ಶಾಂತಿನಗರದ ಸಾರಿಗೆ ಆಯುಕ್ತ ಕಚೇರಿಯಲ್ಲಿ ಸೋಮವಾರ ನಡೆದ ಬಹಿರಂಗ ಹರಾಜಿನಲ್ಲಿ ಒಟ್ಟು 13 ಸಂಖ್ಯೆಗಳು ಹರಾಜಾದಾವು. ಈ ಪೈಕಿ 9999 ಸಂಖ್ಯೆ .4.01 ಲಕ್ಷ, 0005 ಸಂಖ್ಯೆ .2.01 ಲಕ್ಷ, 0009 ಸಂಖ್ಯೆ . 1.57 ಲಕ್ಷ, 0999 ಸಂಖ್ಯೆ .1.05 ಲಕ್ಷ, 0099, 3456, 8055, 0007 ನೋಂದಣಿ ಸಂಖ್ಯೆಗಳು ತಲಾ .76 ಸಾವಿರಕ್ಕೆ ಬಿಕರಿಯಾದವು. 

ಒಟ್ಟು 13 ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಹರಾಜಿನಿಂದ ಸಾರಿಗೆ ಇಲಾಖೆಗೆ .21,36,500 ಆದಾಯ ಬಂದಿದೆ.