‘ಎಲ್ಲದಕ್ಕೂ ಅಲ್ಲೇ ಉತ್ತರಿಸುವೆ’:ಪ್ರಣಬ್

First Published 2, Jun 2018, 4:40 PM IST
'Will Respond in Nagpur': Pranab Mukherjee
Highlights

ಆರ್‏ಎಸ್ಎಸ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ನವದೆಹಲಿ(ಜೂ.2):ಆರ್‏ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ತಮಗೆ ಆರ್‏ಎಸ್ಎಸ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಕೋರಿ ಹಲವು ಪತ್ರಗಳು, ದೂರವಾಣಿ ಕರೆಗಳು ಬಂದಿದೆ. ಆದರೆ ತಾವು ಯಾವುದಕ್ಕೂ ಪ್ರತಿಕ್ರಯಿಸಿಲ್ಲ. ಅವರಿಗೆಲ್ಲಾ ನಾಗಪುರದಲ್ಲಿಯೇ ಪ್ರತಿಕ್ರಿಯೆ ನೀಡುವುದಾಗಿ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಪ್ರಣಬ್ ಮುಖರ್ಜಿ ಆರ್‏ಎಸ್ಎಸ್ ಕಾಯರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತು ಕಾಂಗ್ರೆಸ್ ನಲ್ಲಿಯೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಿರಿಯ ನಾಯಕರಾದ ಜೈರಾಮ್ ರಮೇಶ್, ಸಿ.ಕೆ. ಜಾಫರ್ ಶರೀಫ್ ಸೇರಿ ಹಲವರು ಮುಖರ್ಜಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.

ಇನ್ನು ಮತ್ತೋರ್ವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಮುಖರ್ಜಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದು, ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ  ಆರ್‏ಎಸ್ಎಸ್  ಸಿದ್ದಾಂತದಲ್ಲಿರುವ ದೋಷಗಳನ್ನು ಮುಖರ್ಜಿ ಸಂಘದ ಕಾರ್ಯಕರ್ತರಿಗೆ ಮನವರಿಕೆ ಮಾಡಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.   

loader