ಚಂದ್ರಬಾಬು ನಾಯ್ಡು ಮತಲಂಚ ಪ್ರಕರಣಕ್ಕೆ ಮರುಜೀವ

'Cash-for-vote' case comes back to haunt Telugu states
Highlights

2015 ರ ಮತಲಂಚ ಪ್ರಕರಣ ಆಂಧ್ರಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಅವರನ್ನು ಮತ್ತೆ ಬಾಧಿಸುವ ಸಾಧ್ಯತೆ ಇದೆ. ಈ ಪ್ರಕರಣದ ಎಸಿಬಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ಬುಧವಾರ ಪರಿಶೀಲನೆ ನಡೆಸಿ ದ್ದಾರೆ. 

ಹೈದರಾಬಾದ್: 2015 ರ ಮತಲಂಚ ಪ್ರಕರಣ ಆಂಧ್ರಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಅವರನ್ನು ಮತ್ತೆ ಬಾಧಿಸುವ ಸಾಧ್ಯತೆ ಇದೆ.

ಈ ಪ್ರಕರಣದ ಎಸಿಬಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ಬುಧವಾರ ಪರಿಶೀಲನೆ ನಡೆಸಿ ದ್ದಾರೆ. 

ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಸಂಬಂಧ ಮುಂದಿನ ಕ್ರಮಗಳ ಬಗ್ಗೆ ಕೆಲವು ಸೂಚನೆ ನೀಡಿದ್ದಾರೆ. 3 ವರ್ಷದ ಹಿಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಟಿಡಿಪಿ ಶಾಸಕರೊಬ್ಬರು ಟಿಆರ್ ಎಸ್ ಶಾಸಕರೊಬ್ಬರಿಗೆ 50 ಲಕ್ಷ ರು. ಲಂಚದ ಆಮಿಷ ಒಡ್ಡುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದರು.

loader