Asianet Suvarna News Asianet Suvarna News

ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್| ಕಾರ್ಮಿಕರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಾಲಿವುಡ್‌ ನಟ| ಅನಾಥ, ಬಡವರು ಹಾಗೂ ಕಾರ್ಮಿಕರ ಪಾಲಿನ ಸೂಪರ್ ಹೀರೋ ಎನಿಸಿಕೊಂಡ ಸೋನು ಸೂದ್

Will not rest until every single migrant worker reaches home saysSonu Sood
Author
Bangalore, First Published May 25, 2020, 2:41 PM IST

ಮುಂಬೈ(ಮೇ.25): ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರು ಹಾಗೂ ಬಡ ವರ್ಗದ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಹಸಿವಿನಿಂದ ಕಂಗಾಲಾಗಿರುವ ಜನರಿಗೆ ಆಹಾರ ತಲುಪಿಸುವ ಕಾರಕವನ್ನೂ ಮಾಡುತ್ತಿದ್ದಾರೆ. ಅವರ ಈ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಹೀಗಿರುವಾಗ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಬಾಲಿವುಡ್ ನಟ ಸೋನು ಸೂದ್ ತಮ್ಮ ಮನೆಯಿಂದ ದೂರ ಸಿಲುಕಿಕೊಂಡಿರುವ ಪ್ರತಿಯೊಬ್ಬ ಕಾರ್ಮಿಕ ಮನೆ ಸೇರುವವರೆಗೆ ತಾನು ವಿಶ್ರಾಂತಿ ಪಡೆಯುವುದಿಲ್ಲ ಎಂದಿದ್ದಾರೆ. ಅಲ್ಲದೇ ಕಾರ್ಮಿಕರು ಸುರಕ್ಷಿತವಾಗಿ ಮನೆ ಸೇರುವವರೆಗೆ ನನ್ನ ಈ ಕೆಲಸ ಮುಂದುವರೆಸುತ್ತೇನೆ. ಇದಕ್ಕೆ ತಗುಲುವ ಶ್ರಮದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಆದ್ರೆ ಪ್ರತಿಯೊಬ್ಬರೂ ತಮ್ಮ ಮನೆ ಸೇರಬೇಕು ಎನ್ನುವುದೇ ನನ್ನ ಆಶಯ' ಎಂದಿದ್ದಾರೆ. 

Will not rest until every single migrant worker reaches home saysSonu Sood

ವಲಸೆ ಕಾರ್ಮಿಕರ ಡೈರಿಯಿಂದ; ಮನ ಮುಟ್ಟುವಂತಹ ಮಾತುಗಳು!

ಇನ್ನು ಇದಕ್ಕೆಷ್ಟು ಶ್ರಮ ಹಾಕುತ್ತಿದ್ದಾರೆಂಬ ಕುರಿತಾಗಿ ವಿವರಿಸಿದ ಸೋನು ಸೂದ್ 'ಇದಕ್ಕಾಗಿ ಬಹಳಷ್ಟು ಪೇಪರ್ ವರ್ಕ್ ಮಾಡಬೇಕಾಗುತ್ತದೆ. ಶಿಕ್ಷಣದಿಂದ ವಂಚಿತರಾದ ಕಾರ್ಮಿಕರಿಗೆ ಇದನ್ನು ಮಾಡುವುದು ಬಹಳ ಕಷ್ಟವಾಗುತ್ತದೆ. ಹೀಗಾಗಿ ನಾನೇ ಮಾಡುತ್ತೇನೆ' ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಈ ಪ್ರಕ್ರಿಯೆಯನ್ನು ಇನ್ನೂ ಸರಳವಾಗಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸೋನು ಶ್ರಮ ಪಡುತ್ತಿರುವುದೇಕೆ?

ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಸುಡು ಬಿಸಿಲ್ಲೇ ತಮ್ಮ ದೂರದೂರಿಗೆ ಪ್ರಯಾಣಿಸುತ್ತಾರೆ. ಈ ಮೂಲಕ ಲಾಕ್‌ಡೌನ್ ಅವರ ಮನದಲ್ಲಿ ಕಹಿಯಾಗಿ ಉಳಿಯಲಿದೆ. ಹೀಗಾಗುವುದು ಏಡ ಎನ್ನುವ ನಿಟ್ಟಿನಲ್ಲಿ ನಾನು ಈ ಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಸೇವೆ ಮಾಡುವಾಗ ಯಾವ ಪ್ರಚಾರವನ್ನು ಪಡೆಯಬಾರದೆಂದು ಉಪನ್ಯಾಸಕಿಯಾಗಿದ್ದ ತಾಯಿ ಹೆಳಿಕೊಟ್ಟಿದ್ದರು. ಇದನ್ನೇ ಪಾಲಿಸುತ್ತಿದ್ದೇನೆ ಎಂದಿದ್ದಾರೆ.

ಕರ್ನಾಟಕದ ವಲಸಿಗರಿಗೆ ಆಪ್ತರಕ್ಷಕನಾಗಿ ಬಂದ ನಿಜನಾಯಕ ಸೋನು ಸೂದ್

ನಟ ಸೋನು ಸೂದ್ ಪ್ರತಿ ದಿನ ಅಂಧೇರಿ, ಜುಹೂ, ಜೋಗೇಶ್ವರಿ ಹಾಗೂ ಬಾಂದ್ರಾ ಸುಮಾರು 45 ಸಾವಿರ ಮಂದಿಗೆ ಪ್ರತಿದಿನ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ಕಾರ್ಮಿಕರು ತಮ್ಮೂರಿಗೆ ತಲುಪಲು ಬೇಕಾದ ವ್ಯವಸ್ಥೆ ಮಾಡಿ ಉಚಿತವಾಗಿ ಅವರನ್ನು ಕಳುಹಿಸಿಕೊಡುತ್ತಿದ್ದಾರೆ. ಅಲ್ಲದೇ ಬಸ್‌ಗಳಲ್ಲಿ ಸರಿಯಾದ ವ್ಯವಸ್ಥೆ ಮಾಡಲಾಗಿದೆಯೇ ಎಂದು ಖುದ್ದು ನಿಂತು ಪರಿಶೀಲಿಸಿ ನಗುಮೊಗದಿಂದ ಅವರನ್ನು ಕಳುಹಿಸಿಕೊಂಡುತ್ತಿದ್ದಾರೆ.
 

Follow Us:
Download App:
  • android
  • ios