ಮುಂಬೈ(ಏ.30): ಅನಾರೋಗ್ಯ ಹಿನ್ನೆಲೆ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್‌ರನ್ನು ಮುಂಬೈನನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಹಿರಿಯ ಸಹೋದರ ರಂದೀರ್ ಕಪೂರ್ ತಿಳಿಸಿದ್ದಾರೆ. ಆರೋಗ್ಯ ಕೈಕೊಟ್ಟ ಹಿನ್ನೆಲೆ 67 ವರ್ಷದ ರಿಷಿ ಕಪೂರ್‌ರನ್ನು ಬುಧವಾರ ಬೆಳಗ್ಗೆ ಎಚ್. ಎನ್‌ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಷಿ ಕಪೂರ್ ಆಸ್ಪತ್ರೆಯಲ್ಲಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಂದೀರ್ ಕಪೂರ್ ತಿಳಿಸಿದ್ದಾರೆ.

ಕ್ಯಾನ್ಸರ್ ವಿರುದ್ಧ ಹೋರಾಡಿದ್ದು ಕಷ್ಟದ ಸಮಯ; ಭಾವುಕರಾದ ರಿಷಿ ಕಪೂರ್

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ರಿಷಿ ಕಪೂರ್‌ ಚಿಕಿತ್ಸೆಗೆಂದು ಅಮೆರಿಕಗೆ ತೆರಳಿದ್ದರು. ಸುಮಾರು ಒಂದು ವರ್ಷ ಅಲ್ಲೇ ಇದ್ದು ಚಿಕಿತ್ಸೆ ಪಡೆದಿದ್ದ ಅವರು ಕಳೆದ ಸಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದಿಂದಾಗಿ ಎರಡು ಬಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ದೆಹಲಿಯಲ್ಲಿ ನಡೆದಿದ್ದ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರಿಷಿ ಕಪೂರ್ ಮೊದಲ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.. ವಾಪಾಸಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು ಸೋಂಕಿನಿಂದ ಬಳಲುತ್ತಿದ್ದೆ ಎಂದು ಹೇಳಿದ್ದರು. ಆದರೆ ಮುಂಬೈಗೆ ಮರಳಿದ್ದ ಅವರು ಜ್ವರದಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. 

ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತ

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಯಾವತ್ತೂ ಆಕ್ಟಿವ್ ಆಗಿರುವ ಕಪೂರ್ ಏಪ್ರಿಲ್ 2ರ ಬಳಿಕ ಯಾವುದೇ ಪೋಸ್ಟ್ ಹಾಕಿಲ್ಲ. ಆದರೆ ಇತ್ತೀಚೆಗಷ್ಟೇ ಅವರು ತಮ್ಮ ಮುಂದಿನ ಪ್ರಾಜೆಕ್ಸ್‌ ಬಗ್ಗೆ ಮಾತನಾಡಿದ್ದರು. ಹಾಲಿವುಡ್‌ ಸಿನಿಮಾ ದ ಇಂಟರ್ನ್ ರಿಮೇಕ್‌ ಮಾಡುವುದಾಗಿ ಹೇಳಿದ್ದ ಅವರು, ದೀಪಿಕಾ ಪಡುಕೋಣೆಯನ್ನು ಈ ಸಿನಿಮಾಗೆ ತೆಗೆದುಕೊಳ್ಳುವುದಾಗಿ ನುಡಿದಿದ್ದರು.