5 ತಿಂಗಳ ಹಿಂದಿನ ವೈರಲ್ ವಿಡಿಯೋದ ಬಗ್ಗೆ ಮಾತನಾಡಿದ ನಟಿ/ ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಕೆಲಸದಿಂದ ಮನಸಿಗೆ ನೋವು/ ಅದೊಂದು ಆಕಸ್ಮಿಕ ಘಟನೆ ಅಷ್ಟೆ

ಮುಂಬೈ[ಸೆ. 23] ಮಿಸ್ ಯುನಿವರ್ಸ್ ಊರ್ವಶಿ ರೌಥೆಲಾರ ಹಿಂಭಾಗವನ್ನು ಬೋನಿ ಕಪೂರ್ ಟಚ್ ಮಾಡಿದ್ದರು ಎಂಬ ವಿಡಿಯೋಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಸುಮಾರು ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ ನಲ್ಲಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದಗ್ದ ವೇಳೆ ಬೋನಿ ಕಪೂರ್ ಸಹ ಬಂದಿದ್ದರು. ವೇದಿಕೆ ಮೇಲೆ ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ. ಅವರ ಕೈ ನನಗೆ ತಾಕಿದ್ದಾಗ ನಾನು ಯಾವುದೇ ಪ್ರತಿಕಿಯೆ ಸಹ ನೀಡಿರಲಿಲ್ಲ. ಆದರೆ ಮರುದಿನ ದೊಡ್ಡ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಕ್ಕೆ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದ್ದವು.

ಯಪ್ಪಾ ಈ ವೀಕೆಂಡ್ ಪಾರ್ಟಿ ನೋಡೋಕಾಗಲ್ಲ!

ನನ್ನ ಮತ್ತು ಬೋನಿ ಕಪೂರ್ ನಡುವೆ ಅಫೇರ್ ಇದೆ ಎಂಬುದಾಗಿಯೂ ಮಾತನಾಡಿಕೊಳ್ಳಲಾಗಿತ್ತು. ಒಂದು ವಾರ ಕಾಲ ನನ್ನ ಮೊಬೈಲ್ ಗೆ ನಿರಂತರ ಕರೆಗಳು ಬರುತ್ತಲೇ ಇದ್ದವು ಎಂದು ಅಂದಿನ ಘಟನೆಯಿಂದಾದ ನೋವಿನ ಬಗ್ಗೆ ಹೇಳಿದ್ದಾರೆ.

ಅದೊಂದು ಆ ಕ್ಷಣಕ್ಕೆ ನಡೆದ ಆಕಸ್ಮಿಕವಷ್ಟೆ. ಆದರೆ ಆ ವಿಡಿಯೋ ಬಣ್ಣ ತೆಗೆದುಕೊಂಡ ರೀತಿ ನಿಜಕ್ಕೂ ನನಗೂ ಮತ್ತು ಬೋನಿ ಕಪೂರ್ ಇಬ್ಬರಿಗೂ ನೋವುಂಟು ಮಾಡಿದೆ ಎಂದು ನಟಿ ಹೇಳಿದ್ದಾರೆ.