ಮೋದಿ ಧ್ಯಾನ ಮಾಡಿದ್ದ ಫೋಟೋಗೆ ಪ್ರತಿಪಕ್ಷಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಎದುರಾಗಿದ್ದವು. ಇದೀಗ ಈ ಬಾಲಿವುಡ್ ನಟಿಯ ಸರದಿ.

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಆಧ್ಯಾತ್ಮಿಕ ಫೋಟೋಗಳನ್ನು ನೋಡಿ  ನಾನು ರೀತಿ ಪೋಸ್ ಕೊಟ್ಟಿದ್ದೇನೆ ಎಂದಿದ್ದಾರೆ. ಜತೆಗೆ ಮೆಡಿಟೇಶನ್ ಫೋಟೋಗಳಿಗೆ ಪೋಸ್ ಕೊಡುವ ಬಗ್ಗೆ ತರಗತಿ ಆರಂಭೀಸಬೇಕು ಎಂದಿದ್ದೇನೆ. ವೆಡ್ಡಿಂಗ್ ಪೋಟೋಗಳಂತೆ ಇದು ಮುಂದೊಂದು ದಿನ ಟ್ರೆಂಡ್ ಆಗಲಿದೆ ಎಂದು ನಟಿ ಟ್ವಿಂಕಲ್ ಖನ್ನಾ ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಹೆಸರನ್ನು ಎಲ್ಲಿಯೂ ಖನ್ನಾ ಉಲ್ಲೇಖಿಸದೆ ಇದ್ದರೂ ಜನರು ಇದು ಮೋದಿಯನ್ನು ಅಣಕಿಸಲು ಮಾಡಿದ ಕೆಲಸ ಎಂದು ಟ್ವಿಂಕಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

 

 

.