ಡಬ್ಬಿಂಗ್ ಮಾಡುವಾಗ ಹೃದಯಾಘಾತದಿಂದ ಅಗಲಿದೆ ನಟ ಮಾರಿಮುತ್ತು
ನೆಚ್ಚಿನ ಕೆಲಸ ಮಾಡುವಾಗಲೇ ಕೊನೆ ಉಸಿರೆಳೆದ ಹಿರಿಯ ನಟ ಜಿ ಮಾರಿಮುತ್ತು. ಶಾಕ್‌ನಲ್ಲಿ ಚಿತ್ರರಂಗ....

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಮರಿಮುತ್ತು ಇಂದು ಬೆಳಗ್ಗೆ ಟಿವಿ ಶೋಗೆ ಡಬ್ಬಿಂಗ್ ಮಾಡುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. 57 ವರ್ಷ ಮಾರಿಮುತ್ತು ಪುಲಿವಾಲ್ ಮತ್ತು ಕಣ್ಣುಮ್ ಕಣ್ಣುಮ್ ಸಿನಿಮಾ ನಿರ್ದೇಶನ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ರಜನಿಕಾಂತ್ ನಟಿಸಿರುವ ಜೈಲರ್ ಸಿನಿಮಾದಲ್ಲಿ ನಟಿಸಿದ್ದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಸನ್‌ಟಿವಿಯಲ್ಲಿ ಪ್ರಸಾರವಾಗುತ್ತಿರುವ Ethir Neechalನಲ್ಲಿ ಆದಿ ಗುಣಶೇಖರ್‌ನ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಈ ಪಾತ್ರಕ್ಕೆ ಸಾಕಷ್ಟು ಬೆಂಬಲ ಸಿಕ್ಕಿತ್ತು. ಧಾರಾವಾಹಿ ಮೂಲಕವೇ ಸಾಕಷ್ಟು ಖ್ಯಾತಿ ಪಡೆದಿದ್ದರು. ಮಾರಿಮುತ್ತು ಅಗಲಿಕೆಯಿಂದ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ದುಖಃ ತಂದಿದೆ.
ನೋವನ್ನು ಬಿಡುವುದು ಕಷ್ಟ, ಕಳೆದವಾರ ಕಿರುತೆರೆಗೆ ಬಂದೆ ಈ ವಾರ ಚಿತ್ರಮಂದಿರಕ್ಕೆ ಬಂದೆ: ವಿಜಯ್ ರಾಘವೇಂದ್ರ
1999ರಲ್ಲಿ ವಾಲಿ ಸಿನಿಮಾ ಮೂಲಕ ಜರ್ನಿ ಆರಂಭಿಸಿ ಇತ್ತೀಚಿನ ದಿನಗಳಲ್ಲಿ ತೆರೆ ಕಂಡ ಗಾಡ್ ಫಾದರ್, ಭೂಮಿ, ಸುಲ್ತಾನ್, ಡಾಕ್ಟರ್, ವಿಕ್ರಂ, ರಾಧಾ ಕೃಷ್ಣ, ತೀರಾ ಕಾದಲ್, ಜೈಲರ್ ಮತ್ತು ಇಂಡಿಯಾ 2 ಸಿನಿಮಾದಲ್ಲಿ ನಟಿಸಿದ್ದಾರೆ.