ಮುಂಬೈ(ಜು.22): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್‌ ಮೂಲಗಳಿಂದ ಇದೀಗ ಮತ್ತೊಂದು ಅಚ್ಚರಿಯ ಅಂಶ ತಿಳಿದುಬಂದಿದೆ.

ಸುಶಾಂತ್‌ ಸಿಂಗ್ ಆತ್ಮ ಮಾತನಾಡುತ್ತಿದೆ; ಆತ್ಮಹತ್ಯೆ ಕಾರಣ ಬಿಚ್ಚಿಟ್ಟ ಆತ್ಮದ ವಿಡಿಯೋ ಇದು?

ಸುಶಾಂತ್‌ ಅವರ ಮಾಜಿ ಮ್ಯಾನೇಜರ್‌ ದಕ್ಷಿಣ ಕನ್ನಡ ಮೂಲದ ದಿಶಾ ಸಾಲಿಯಾನ್‌ ಸಾವಿನ ಬಳಿಕ ಖಿನ್ನತೆಗಾಗಿ ತಾನು ಸೇವಿಸುತ್ತಿದ್ದ ಔಷಧವನ್ನು ನಿಲ್ಲಿಸಿದ್ದರು. ಇದರಿಂದ ಸುಶಾಂತ್‌ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಮೂವರು ಮನೋವೈದ್ಯರು ಹಾಗೂ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡುವ ವೈದ್ಯರೊಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಮನೋಶಾಸ್ತ್ರಜ್ಞರೊಬ್ಬರನ್ನು ಬಾಂದ್ರಾ ಪೊಲೀಸರು ಠಾಣೆಗೆ ಕರೆಸಿಕೊಂಡು 5 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.