ಮುಂಬೈ(ಜು.02): ಭಾರೀ ವಿವಾದಕ್ಕೆ ಕಾರಣವಾಗಿರುವ ಬಾಲಿವುಡ್‌ ಯುವನಟ ಸುಶಾಂತ್‌ ಸಿಂಗ್‌ ರಜಪೂತ್‌ ಸುತ್ತ ಇರುವ ಅನುಮಾನದ ಹುತ್ತ ಹೆಚ್ಚಾಗುತ್ತಲೇ ಇದೆ.

ಸುಶಾಂತ್‌ ಒಂದು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಸಿಮ್‌ ಕಾರ್ಡ್‌ ಬದಲಿಸಿದ್ದರು. ಅವರ ಮನೆಯ ನಕಲಿ ಕೀ ಕಳೆದುಹೋಗಿತ್ತು. ಸುಶಾಂತ್‌ ಸಾವಿನ ರಹಸ್ಯಕಣ್ಣಿಗೆ ನಿಲುಕದ್ದು ಎಂದು ಸುಶಾಂತ್‌ ಸಿಂಗ್‌ ಸಾವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ‘ಜಸ್ಟೀಸ್‌ ಫಾರ್‌ ಸುಶಾಂತ್‌ ಫೋರಂ’ ಆರಂಭಿಸಿರುವ ನಟ ಶೇಖರ್‌ ಸುಮನ್‌ ಹೇಳಿದ್ದಾರೆ.

ಮತ್ತೆ ಸದ್ದು ಮಾಡಿತು ನಟ ಸುಶಾಂತ್ ಸಿಂಗ್ ಹಳೆ ವಿಡಿಯೋ!

ಅಲ್ಲದೇ ಸಾವಿಗಿಂತ ಮುಂಚೆ ಸುಶಾಂತ್‌ ಅವರು ತಮ್ಮ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ ಕೆಲ ಲೇಖನಗಳನ್ನು ಓದಿದ್ದರು ಎಂದು ಪೊಲೀಸರು ಹೇಳಿದ್ದಾರೆ.