ನವದೆಹಲಿ[ಮಾ.19]: ಕೊರೋನಾ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ, ಆಗಾಗ್ಗೆ ಮೋದಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವ ಖ್ಯಾತ ನಟಿ ಸೋನಂ ಕಪೂರ್‌ ಕೂಡಾ ಭಾರತ ಸರ್ಕಾರವನ್ನು ಹೊಗಳಿದ್ದಾರೆ.

 
 
 
 
 
 
 
 
 
 
 
 
 

Stay safe guys♥️ @sonamkapoor . . . #sonamkapoor // #corona #coronavirus #covid_19

A post shared by Sonam K Ahuja (@sonamkapoorpedia) on Mar 17, 2020 at 4:34am PDT

ಪತಿ ಆನಂದ್‌ ಜೊತೆಗೂಡಿ ಬುಧವಾರ ಲಂಡನ್‌ನಿಂದ ದೆಹಲಿಗೆ ಆಗಮಿಸಿದ ಸೋನಂ, ‘ದೆಹಲಿಗೆ ಆಗಮಿಸಿದ ಬಳಿಕ ನಿಲ್ದಾಣದಲ್ಲಿ ಅತ್ಯಂತ ಸರಾಗ ರೀತಿಯಲ್ಲಿ, ಉತ್ತಮವಾದ ಕ್ರಮದಲ್ಲಿ ಆರೋಗ್ಯ ತಪಾಸಣೆ ಮಾಡಲಾಯ್ತು. ಅಚ್ಚರಿ ಎಂದರೆ ಲಂಡನ್‌ ವಿಮಾನ ನಿಲ್ದಾಣದಲ್ಲಿ ಇಂಥ ಯಾವುದೇ ಪರೀಕ್ಷೆಯನ್ನೂ ನಮಗೆ ಮಾಡಲಿಲ್ಲ. ಅದನ್ನು ನೋಡಿ ನಮಗೆ ಆತಂಕವಾಗಿತ್ತು.

 
 
 
 
 
 
 
 
 
 
 
 
 

Love you too Queen !❤️ @sonamkapoor via her insta stories ✨ // #sonamkapoor

A post shared by Sonam K Ahuja (@sonamkapoorpedia) on Mar 17, 2020 at 2:39am PDT

ಭಾರತದಲ್ಲಿ ಇಡೀ ತಪಾಸಣೆಯನ್ನು ಅತ್ಯಂತ ಜವಾಬ್ಧಾರಿಯುತವಾಗಿ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಸರ್ಕಾರ ಏನು ಮಾಡಬಹುದೋ ಆ ಕೆಲಸವನ್ನು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಮಾಡುತ್ತಿದೆ ಎಂದು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.