ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಜನ್ಮದಿನದಂದು ಅಭಿಮಾನಿಗಳಿಗೆ ಸಿಗರೇಟ್ ತ್ಯಜಿಸಿರುವುದಾಗಿ ತಿಳಿಸಿದ್ದಾರೆ. ಧೂಮಪಾನ ತ್ಯಜಿಸಿದ ನಂತರ ಉಸಿರಾಟದಲ್ಲಿ ಸ್ವಲ್ಪ ಬದಲಾವಣೆ ಕಾಣುತ್ತಿದ್ದರೂ, ಹೊಸ ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅಚ್ಚರಿಯ ಘೋಷಣೆ ಮಾಡಿದ್ದಾರೆ. ನವೆಂಬರ್‌ 2 ರಂದು ತಮ್ಮ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮೀಟ್‌ & ಗ್ರೀಟ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳಿಗೆ ಶಾಕಿಂಗ್‌ ನ್ಯೂಸ್‌ ನೀಡಿದ್ದಾರೆ. ತಮ್ಮ ಸಿಗರೇಟ್‌ ಚಟದ ಬಗ್ಗೆ ಹಿಂದಿನಿಂದಲೂ ಮುಕ್ತವಾಗಿ ಮಾತನಾಡುತ್ತಿದ್ದ ಶಾರುಖ್‌ ಖಾನ್‌, ಅಭಿಮಾನಿಗಳಿಗೆ ತಾವು ಸಿಗರೇಟ್‌ ಬಿಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. 'ಒಂದು ಒಳ್ಳೆಯ ವಿಚಾರವಿದೆ. ನಾನು ಇನ್ನು ಮುಂದೆ ಸ್ಮೋಕಿಂಗ್‌ ಮಾಡೋದಿಲ್ಲ' ಎಂದು ಖಾನ್‌ ಅಭಿಮಾನಿಗಳ ಸಮ್ಮುಖದಲ್ಲಿ ಹೇಳಿದ್ದಾರೆ.

ಬದಲಾವಣೆಯನ್ನು ಬಗ್ಗೆ ಮಾತನಾಡಿದ ಅವರು, ಧೂಮಪಾನವನ್ನು ತ್ಯಜಿಸಿದ ನಂತರ ಕಡಿಮೆ ಉಸಿರಾಟವನ್ನು ಅನುಭವವನ್ನು ನೋಡುತ್ತಿದ್ದೇನೆ ಎಂದು ಖಾನ್ ಒಪ್ಪಿಕೊಂಡಿದ್ದಾರೆ. ಆದರೆ, ಸ್ಮೋಕಿಂಗ್‌ ಬಿಟ್ಟ ನಂತರ ಪರಿಣಾಮವೂ ಗೊತ್ತಾಗುತ್ತಿದೆ ಎಂದಿದ್ದಾರೆ.

'ಧೂಮಪಾನವನ್ನು ತ್ಯಜಿಸಿದ ನಂತರ ನಾನು ಉಸಿರುಗಟ್ಟುವುದಿಲ್ಲ ಎಂದು ನಾನು ಭಾವಿಸಿದೆ, ಆದರೆ ಭಾವನೆ ಇನ್ನೂ ಇದೆ..' ಎನ್ನುವ ಮೂಲಕ ಬದಲಾವಣೆಗೆ ನಾನಿನ್ನೂ ಒಗ್ಗಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ದೇವರ ದಯೆಯಿಂದ ಇದೂ ಕೂಡ ಫೈನ್‌ ಆಗಿರಲಿದೆ ಎಂದು ತಿಳಿಸಿದ್ದಾರೆ.

ಸ್ಮೋಕಿಂಗ್‌ ಹಾಗೂ ಕೆಫೆನ್‌ ಹ್ಯಾಬಿಟ್‌ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದ ಹಲವು ವರ್ಷಗಳ ನಂತರ ಅವರ ಈ ನಿರ್ಧಾರ ಬಂದಿದೆ. 2011ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್‌ ಖಾನ್‌, ತಮ್ಮ ಲೈಫ್‌ಸ್ಟೈಲ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಾನು ದಿನಕ್ಕೆ ಕನಿಷ್ಠ 100 ಸಿಗರೇಟ್‌ ಸೇದುತ್ತೇನೆ. ಒಮ್ಮೊಮ್ಮೆ ಊಟ ಮಾಡೋದು ಕೂಡ ನೆನಪಾಗೋದಿಲ್ಲ. ನಾನು ನೀರನ್ನು ಕುಡಿಯೋದಿಲ್ಲ. ನನ್ನ ಬಳಿ ಸುಮಾರು 30 ಕಪ್ ಬ್ಲ್ಯಾಕ್‌ ಕಾಫಿ ಇದೆ ಮತ್ತು ನನ್ನ ಬಳಿ ಸಿಕ್ಸ್ ಪ್ಯಾಕ್ ಇದೆ'ಎಂದು ಹೇಳಿದ್ದಾರೆ.

ತಂದೆಯ ಮರಣದ ನಂತರ ಶಾರುಖ್ ಖಾನ್ ಅವರ ಮುಖ ನೋಡಲಿಲ್ಲ ಏಕೆ?

ಶಾರುಖ್ ಖಾನ್ ತಮ್ಮ ಮುಂದಿನ ಆಕ್ಷನ್ ಥ್ರಿಲ್ಲರ್ ಕಿಂಗ್ ಗಾಗಿ ಸಜ್ಜಾಗುತ್ತಿದ್ದಾರೆ, ಇದನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದಾರೆ. ಆರಂಭದಲ್ಲಿ ಇದರಲ್ಲಿ ಅವರು ಡಾನ್‌ ಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಹೇಳಲಾಗಿತ್ತಾದರೂ, ಹೊಸ ಅಪ್‌ಡೇಟ್‌ಗಳ ಪ್ರಕಾರ ಅವರು ಕೊಲೆಗಾರನ ಪಾತ್ರ ನಿಭಾಯಿಸುತ್ತಿರಬಹುದು ಎನ್ನಲಾಗಿದೆ. ಚಿತ್ರದಲ್ಲಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದು, ಅಭಿಷೇಕ್ ಬಚ್ಚನ್ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಕೋಟಿಗಟ್ಟಲೆ ಆಸ್ತಿ ಇರುವ ಶಾರುಖ್ ಖಾನ್: ಗಂಟೆಗೆ ಎಷ್ಟು ವೇತನ ಪಡೆಯುತ್ತಾರೆ?