ಮುಂಬೈ (ಏ. 05): ಕೊರೋನಾ ವೈರಸ್‌ ವಿರುದ್ಧದ ಸಮರಕ್ಕೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಕೈಜೋಡಿಸಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮ್ಮ 4 ಅಂತಸ್ತಿನ ಕಚೇರಿ ಬಿಟ್ಟುಕೊಟ್ಟಿದ್ದಾರೆ.

ಅಲ್ಲದೇ ಶಾರುಖ್‌ ಖಾನ್‌ ತಮ್ಮ ಒಡೆತನದ ಕಂಪನಿಗಳಾದ ಕೋಲ್ಕತಾ ನೈಟ್‌ ರೈಡರ್ಸ್​ ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌, ಮೀರ್‌ ಫೌಂಡೇಶನ್‌ ಮತ್ತು ರೆಡ್‌ ಚಿಲ್ಲೀಸ್‌ ಚಿಎಫ್‌ಎಕ್ಸ್‌ಗಳ ಮೂಲಕವೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.

 

ಜೊತೆಗೆ ಎನ್‌ಜಿಒ ಮೀರ್‌ ಫೌಂಡೇಶನ್‌ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಜೊತೆಗೂಡಿ ವೈದ್ಯಕೀಯ ಸಿಬ್ಬಂದಿಗೆ 50,000 ಪಿಪಿಇ ಕಿಟ್‌ಗಳನ್ನು ಪೂರೈಸಲು ನೆರವು ನೀಡಲಿದೆ.