ಬೆಂಗಳೂರು[ಜೂ. 16]  ಸ್ಯಾಂಡಲ್ ವುಡ್‌ನಲ್ಲಿ ಹೊಸಬರ ಪ್ರವೇಶ ದಿನೇ ದಿನೇ ಆಗುತ್ತಲೇ ಇರುತ್ತದೆ. ಗಾಂಧಿನಗರದಲ್ಲಿ ಸದ್ಯ ‘ಸಾರ್ವಜನಿಕರಲ್ಲಿ ವಿನಂತಿ’ಯೂ  ಎಂಬ ವಿಶಿಷ್ಟ ತಲೆಬರಹದ ಸಿನಿಮಾ ಸದ್ದು ಮಾಡುತ್ತಿದೆ.

ಎಆರ್ ಬಾಬು, ನಂದ ಕಿಶೋರ್ ಹಾಗೂ ಬಹದ್ದೂರ್ ಚೇತನ್ ಜೊತೆ ಕೆಲಸ ಮಾಡಿದ ಕೃಪಾಸಾಗರ್ ಯುವ ನಿರ್ದೇಶಕನಾಗಿ ‘ಸಾರ್ವಜನಿಕರಲ್ಲಿ ವಿನಂತಿ’  ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. 

‘ಸಾರ್ವಜನಿಕರಲ್ಲಿ ವಿನಂತಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಎರಡು ಕೊಲೆ ಮಾಡಿದ್ದೇವೆ ಸಾರ್.. ಎಂಬ ಡೈಲಾಗ್ ಟ್ರೇಲರ್ ನಲ್ಲಿಯೇ ಚಿತ್ರದ ತಾಕತ್ತನ್ನು ಹೇಳುತ್ತದೆ. ಮದನ್ ರಾಜ್ ಮತ್ತು ಅಮೃತಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ.

ರಂಗಭೂಮಿ ಕಲಾವಿದರು ಸೇರಿ ಮಾಡಿರುವ ಚಿತ್ರ‘ಸಾರ್ವಜನಿಕರಲ್ಲಿ ವಿನಂತಿ’. ಎಲ್ಲರೂ ನೋಡಿ ಆಶೀರ್ವದಿಸಬೇಕೆಂದು ನಿರ್ದೇಶಕರು ವಿನಂತಿಸಿದ್ದಾರೆ. ಇದೇ ತಿಂಗಳ 21ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.