ಎಆರ್ ಬಾಬು, ನಂದ ಕಿಶೋರ್ ಹಾಗೂ ಬಹದ್ದೂರ್ ಚೇತನ್ ಜೊತೆ ಕೆಲಸ ಮಾಡಿದ ಕೃಪಾಸಾಗರ್ ಯುವ ನಿರ್ದೇಶಕನಾಗಿ ‘ಸಾರ್ವಜನಿಕತಲ್ಲಿ ವಿನಂತಿ’ ಎಂಬ ವಿಶೇಷ ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಒಂದು ವ್ರಾಂಗ್ ಕಾಲ್‌ನಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಇಂಥ ಕ್ರೈಂ ತಡೆಯೋಕೆ ಪೊಲೀಸರು ಸಾರ್ವಜನಿಕರಲ್ಲಿ ಏನೆಂದು ವಿನಂತಿ ಮಾಡಿಕೊಳ್ಳುತ್ತಾರೆ ಎನ್ನುವುದೇ ಈ ಚಿತ್ರದ ಒನ್ ಲೈನ್ ಸ್ಟೋರಿ.

ರಂಗಭೂಮಿ ಕಲಾವಿದರು ಸೇರಿ ಮಾಡಿರುವ ಚಿತ್ರ‘ಸಾರ್ವಜನಿಕರಲ್ಲಿ ವಿನಂತಿ’. ಎಲ್ಲರೂ ನೋಡಿ ಆಶೀರ್ವದಿಸಬೇಕೆಂದು ನಿರ್ದೇಶಕರು ವಿನಂತಿಸಿದ್ದಾರೆ. ಇದೇ ತಿಂಗಳ 21ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ