ಸ್ಯಾಂಡಲ್‌ವುಡ್ ಸ್ಮೈಲಿ ಕ್ಷೀನ್ ಹರ್ಷಿಕಾ ಪೂಣಚ್ಚ ತಂದೆ ಯು ಬಿ ಪೂಣಚ್ಚ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗೆ ಸಣ್ಣ ಕರುಳಿನ ಸಮಸ್ಯೆ ಆಗಿದ್ದು ಆಪರೇಷನ್ ಕೂಡಾ ಆಗಿತ್ತು. ಅದಾದ ಬಳಿಕೆ ಒಂದು ತಿಂಗಳುಗಳ ಕಾಲ ಡ್ರಿಪ್ಸ್‌ನಲ್ಲೇ ಇದ್ದರು. ಇಂದು ತಮ್ಮ ತವರೂರಾದ ಕೊಡಗಿನಲ್ಲಿ ವಿಧಿವಶರಾಗಿದ್ದಾರೆ.

ಫ್ಯಾಮಿಲಿಗೆ ಹೆಚ್ಚು ಆದ್ಯತೆ ನೀಡುವ ಹರ್ಷಿಕಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬದೊಂದಿಗೆ ಕೊಡಗಿನ ಶೈಲಿಯ ಉಡುಪು ಧರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದರು. ಹಾಗೂ ಕುಟುಂಬದೊಂದಿಗೆ ದುಬೈಗೆ ಭೇಟಿ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.