ಬೆಂಗಳೂರು[ಮಾ. 11]  ಮಾನಸಿಕ ಕಿರುಕುಳದ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮೀ ಮೇಲೆ ನಟ ರವಿಪ್ರಕಾಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ವಿಜಯಲಕ್ಷ್ಮೀ ನೆರವಿಗೆ ನೀಡಿರುವ 1 ಲಕ್ಷ ರೂ. ಹಣ ವಾಪಸ್ ನೀಡಬೇಕು.  ಅಲ್ಲದೇ ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು  ದೂರಿನಲ್ಲಿ ಹೇಳಿದ್ದಾರೆ.

ವಿಜಯಲಕ್ಷ್ಮೀ ಕಿರುಕುಳ ಕೇಸ್: ರವಿ ಪ್ರಕಾಶ್ ಸ್ಟಷ್ಟನೆ

ವಿಯಜಲಕ್ಷ್ಮೀ ಮತ್ತು ಅವರ ಸಹೋದರಿ ಉಷಾದೇವಿ ಮೇಲೆ ದೂರು ದಾಖಲಿಸಲಾಗಿದೆ.  ಧನ ಸಹಾಯ ಮಾಡಿದ್ದರೂ ನನ್ನ ವಿರುದ್ಧ ಕೆಟ್ಟ ಪದಗಳನ್ನ ಬಳಕೆ ಮಾಡಿ ನನ್ನನ್ನ ಅವಹೇಳನ ಮಾಡಲಾಗಿದೆ ಎಂದು ಹೇಳಿದ್ದಾರೆ.