ಬೆಂಗಳೂರು[ಜೂ. 10]  ಬೈಕಿಗೆ ಕಾರ್ ಡಿಕ್ಕಿಯಾಗಿ ಯುವ ಖಳ ನಟ ಸಾವನ್ನಪ್ಪಿದ್ದಾರೆ. 24 ವರ್ಷದ ಕುಮಾರ್ ದಾರುಣ ಸಾವಿಗೆ ಗುರಿಯಾಗಿದ್ದಾರೆ.  ಕಗ್ಗಲಿಪುರ ಸಮೀಪದ ಗಾಂಧಿನಗರದಲ್ಲಿ ಮೃತಪಟ್ಟಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಸಿನಿಮಾದಲ್ಲಿ ಕುಮಾರ್ ಖಳನಟನಾಗಿ ಅಭಿನಯಿಸಿದ್ದರು. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬುಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.