ಬೆಂಗಳೂರು[ಜೂ.21] ಯಶ್ ಮತ್ತು ರಾಧಿಕಾ ದಂಪತಿಯ ಮಗುವಿಗೆ ಹೆಸರು ಫೈನಲ್ ಆಗಿದೆ. ಹೆಸರು ಅಂತಿಮ ಆಗಿರುವ ವಿಚಾರವನ್ನು ಸ್ವತಃ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ತಿಳಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ.. ನನಗೆ ಕೊನೆಗೂ ಒಂದು ಹೆಸರು ಸಿಕ್ಕಿದೆ..  ಸುಂದರ ಹೆಸರುಗಳನ್ನು ಸೂಚಿಸಿದ ನಿಮಗೆಲ್ಲ ಧನ್ಯವಾದ.. ನೀವು ಸೂಚಿಸಿದ ಹೆಸರುಗಳನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಪಾಲಕರು ಒಂದು ಹೆಸರನ್ನು ಅಂತಿಮ ಮಾಡಿದ್ದಾರೆ.  ಆದರೆ ಎಲ್ಲವೂ ಬಹಿರಂಗವಾಗಲೂ ಜೂನ್ 23 ರ ವರೆಗೆ ಕಾಯಲೇಬೇಕು! 

Father's Dayಗೆ ಯಶ್ ಮಗಳ ಸ್ಟೆಷಲ್ ಫೋಟೋ ರಿವೀಲ್!

ಹೀಗೆ ಬರೆದುಕೊಂಡಿರುವ ರಾಧಿಕಾ ಪಂಡಿತ್ ಜೂನ್ 23 ಕ್ಕೆ ಮಗುವಿನ ನಾಮಕರಣ ಎಂಬುದನ್ನು ತಿಳಿಸಿದ್ದಾರೆ. ರಾಕಿಂಗ್ ದಂಪತಿ ಮುದ್ದಾದ ಮಗಳ ಪೋಟೋವನ್ನು ಮೊದಲ ಸಾರಿ ಅಕ್ಷಯ ತೃತೀಯದಂದು ಹಂಚಿಕೊಂಡಿದ್ದರು.