ಚಿಕ್ಕಮಗಳೂರು (ಮೇ. 17):  ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಮಲತಾ ಗೆಲುವುಗಾಗಿ ಹೊರನಾಡು ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ರಾಕ್‌ಲೈನ್ ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸಿದರು.  

ಸಹಜವಾಗಿ ಸಮಲತಾ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಗೆಲುವಿನ ಆಸೆ, ನಿರೀಕ್ಷೆ ಇದೆ.   ಮಂಡ್ಯ ಕ್ಷೇತ್ರದ ಜನರು ಸೇರಿದಂತೆ ಇತರೆ ಜನರು ಕೂಡ ಸಮಲತಾ ಜಯ ಸಾಧಿಸಲಿ ಎಂದು ಹೇಳುತ್ತಿದ್ದಾರೆ. ಇವರ ಆಶೀರ್ವಾದವೇ ಸುಮಲತಾ ಗೆಲುವಿಗೆ ವರ. ನಾನು ಕೂಡಾ ತಾಯಿ ಅನ್ನಪೂಣೇಶ್ವರಿ ದೇವಿಯಲ್ಲಿ ಸಮಲತಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. 

ಚುನಾವಣಾ ಪ್ರಚಾರದಲ್ಲಿ ಎದುರಾದ ಟೈಟಲ್ ಗಳ ಬಗ್ಗೆ  ನಂಬಿಕೆ ಇಲ್ಲ. ಜೋಡೆತ್ತು, ನಿಖಿಲ್ ಎಲ್ಲಿದ್ದಿಯಪ್ಪ ಎನ್ನುವ ಟೈಟಲ್ ಇವುಗಳ ಮೇಲೆ ನಂಬಿಕೆ ಇಲ್ಲ.   ಟೈಟಲ್ ಯಿಂದ ಸಿನಿಮಾ ಹೋಗುವುದಿಲ್ಲ. ಟೈಟಲ್ ನಿಂದ ಸಿನಿಮಾ ಹೋಗುತ್ತೇ ಎನ್ನುವುದು ತಪ್ಪು ಕಲ್ಪನೆ. ಸಿನಿಮಾಗೆ ಕಥೆ, ನಾಯಕ  ಮುಖ್ಯ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.