ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡಲು ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಮುಂದಾಗಿದ್ದಾರೆ. ಒಂದು ನಿಮಿಷದ ವಿಡಿಯೋ ಮಾಡಿ ತಮಗೆ ಕಳುಹಿಸಿಕೊಡುವಂತೆಯೂ ಹೇಳಿದ್ದಾರೆ. ಹೇಗಿರುವ ವಿಡಿಯೋ, ಏನು ಕಥೆ..? ಇಲ್ಲಿ ಓದಿ
ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡಲು ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಮುಂದಾಗಿದ್ದಾರೆ. ಒಂದು ನಿಮಿಷದ ವಿಡಿಯೋ ಮಾಡಿ ತಮಗೆ ಕಳುಹಿಸಿಕೊಡುವಂತೆಯೂ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಯನ್ನು ಎಂಟ್ರಿ ಮಾಡಿಸೋಕೆ ಸಿದ್ಧರಾಗಿರೋ ರಿಷಭ್ ಶೆಟ್ಟಿ ತಮ್ಮ ಹೊಸ ಸಿನಿಮಾ 'ಹರಿಕಥೆ ಅಲ್ಲಾ ಗಿರಿಕಥೆ'ಗಾಗಿ ಹೀರೋಯಿನ್ ಹುಡುಕಾಟದಲ್ಲಿದ್ದಾರೆ.
ಹೊಸ ಉತ್ಸಾಹದಲ್ಲಿದ್ದಾರೆ ರಿಷಭ್ ಶೆಟ್ಟಿ
ರಿಷಭ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. 'ತನ್ನ ತಂದೆಯನ್ನು ಭೇಟಿ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವ ಪ್ರೇಯಸಿಯಂತೆ ಒಂದು ನಿಮಿಷದ ವಿಡಿಯೋ ಮಾಡಿ ಕಳುಹಿಸುವಂತೆ ಅವರು ಹೇಳಿದ್ದಾರೆ.
hkgk.rsf@gmail.com ಇಮೇಲ್ ಮಾಡಬೇಕು ಎಂದು ವಿಳಾಸವನ್ನೂ ಸಮೂದಿಸಿದ್ದು, ಮೇಕಪ್ ಹಾಗೂ ಫಿಲ್ಟರ್ ಇಲ್ಲದೆ ವಿಡಿಯೋ ಮಾಡಬೇಕು ಎಂದು ಪ್ರತ್ಯೇಕವಾಗಿ ತಿಳಿಸಿದ್ದಾರೆ.
ರಿಷಭ್ ಶೆಟ್ಟಿ ಕುಟುಂಬಕ್ಕೆ ವಾರಸುದಾರ ಆಗಮನ!
ಈ ಹಿಂದೆ ಬಾಕ್ಸ್ ಆಫೀಸ್ ಹಿಟ್ ಆದ 'ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೋಡು' ಸಿನಿಮಾದ ಪಾತ್ರಗಳನ್ನೂ ಇದೇ ರೀತಿ ಆಯ್ಕೆ ಮಾಡಿಕೊಂಡಿದ್ದರು ರಿಷಭ್. ಈ ಸಿನಿಮಾದಲ್ಲಿಯೂ ಹೊಸ ಮುಖಗಳೇ ಪ್ರಮುಖ ಪಾತ್ರ ನಿರ್ವಹಿಸಿದ್ದನ್ನು ನೆನಪಿಸಬಹುದು.
'ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೋಡು' ಸಿನಿಮಾದ ದಡ್ಡ ಪ್ರವೀಣನ ಪಾತ್ರ, ಪಲ್ಲವಿ, ಮಮ್ಮುಟ್ಟಿ ಪಾತ್ರ ಸಿನಿ ಪ್ರಿಯರ ಮನಸಲ್ಲಿ ಸದಾ ಹಸಿರಾಗಿ ಉಳಿಯುವಂತೆ ಮೂಡಿ ಬಂದಿತ್ತು. ಹರೆಯದ ಪ್ರೇಮ, ಶಾಲೆಯ ಬಗೆಗಿನ ಪ್ರೀತಿ, ಜನರ ಒಗ್ಗಟ್ಟು, ಗಡಿ ಭಾಗದ ಕನ್ನಡ ಭಾಷಾ ಶೈಲಿ, ಹಾಸ್ಯ ಹೀಗೆ ಎಲ್ಲವೂ ಸೇರಿ ವೀಕ್ಷಕರ ಮನಸಿನಲ್ಲಿ ಉಳಿಯುವಲ್ಲಿ ಸಿನಿಮಾ ಯಶಸ್ವಿಯಾಗಿತ್ತು.
