ಆಸ್ಕರ್‌ ಪ್ರಶಸ್ತಿ ವಿಜೇತ ಆರ್‌ಆರ್‌ಆರ್‌ ಸಿನಿಮಾದ ಛಾಯಾಗ್ರಾಹಕ ಕೆಕೆ ಸೆಂಥಿಲ್‌ ಕುಮಾರ್‌ ಅವರ ಪತ್ನಿ ರೂಹಿ ನಿಧನರಾಗಿದ್ದಾರೆ. ಯೋಗ ಕೋಚ್‌ ಆಗಿದ್ದ ರೂಹಿ ಸಿಕಂದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.

ಹೈದರಾಬಾದ್‌ (ಫೆ.15): ಪ್ರಖ್ಯಾತ ಸಿನಿಮಾಟೋಗ್ರಾಫರ್‌ ಕೆಕೆ ಸೆಂಥಿಲ್‌ ಕುಮಾರ್‌ ಅವರಿಗೆ ಪತ್ನಿವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಥಿಲ್‌ ಕುಮಾರ್‌ ಅವರ ಪತ್ನಿ ರೂಹಿ ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಿಧನರಾದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೂಹಿ ಯೋಗ ಕೋಚ್‌ ಆಗಿಯೂ ದೊಡ್ಡ ಮಟ್ಟದ ಹೆಸರು ಸಂಪಾದಿಸಿದ್ದರು. 2009ರಲ್ಲಿ ರೂಹಿ ಹಾಗೂ ಸೆಂಥಿಲ್‌ ಕುಮಾರ್‌ ಅವರ ವಿವಾಹ ನೆರವೇರಿತ್ತು. ಅನಾರೋಗ್ಯದ ಕಾರಣದಿಂದಾಗ ಸಿಕಂದರಬಾದ್‌ನ ಪ್ರಮುಖ ಖಾಸಗಿ ಆಸ್ಪತ್ರೆಗೆ ರೂಹಿ ಇತ್ತೀಚೆಗೆ ದಾಖಲಾಗಿದ್ದರು. ಆದರೆ, ಅವರ ಸಾವಿಗೆ ನಿಖರ ಕಾರಣವೇನು ಅನ್ನೋದು ತಿಳಿದುಬಂದಿಲ್ಲ.

ಚಿಕಿತ್ಸೆ ಪಡೆಯುತ್ತಿರುವಾಗಲೇ ರೂಹಿ ಕೊನೆಯುಸಿರೆಳೆದಿದ್ದಾರೆ. ರೂಹಿ ಅವರ ನಿಧನದಿಂದ ಇಡೀ ಚಿತ್ರರಂಗ ಆಘಾತಕ್ಕೊಳಗಾಗಿದ್ದು, ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಹೈದರಾಬಾದ್‌ನ ಮಹಾಪ್ರಸ್ಥಾನದಲ್ಲಿ ಆಕೆಯ ಅಂತಿಮ ಸಂಸ್ಕಾರ ನಡೆಯಲಿದೆ.

ಪ್ರೀತಿ, ಕಾಮದ ಟಿಪ್ಸ್​ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್​ ವಿಷ್ಯ ಹೇಳಿದ ನಟಿ ಜೀನತ್​ ಅಮಾನ್​!

ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರೊಂದಿಗೆ ದೀರ್ಘಕಾಲದಿಂದ ಸೆಂಥಿಲ್‌ ಕೆಲಸ ಮಾಡಿದ್ದಾರೆ. ತಮ್ಮ ಅಭೂತಪೂರ್ವ ಸಿನಿಮಾಟೋಗ್ರಫಿಗೆ ಸೆಂಥಿಲ್‌ ಹೆಸರುವಾಸಿ. ರಾಜಮೌಳಿ ಅವರ, ಸೈ, ಛತ್ರಪತಿ, ಯಮದೊಂಗ, ಮಗಧೀರ, ಈಗ, ಬಾಹುಬಲಿ 1 & 2 ಮತ್ತು RRR ನಂತಹ ವಿವಿಧ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ.

ವಯಾಗ್ರ ಸೇವಿಸಿ ಫರ್ಸ್ಟ್‌ ನೈಟ್‌ನಲ್ಲಿ ಭಾಗಿಯಾದ ಪತಿ, ಸಾವು ಕಂಡ ಪತ್ನಿ!

ಹಲವು ವರ್ಷಗಳ ಕಾಲ ಅನುಷ್ಕಾ ಶೆಟ್ಟಿಗೆ ಯೋಗ ಟೀಚರ್‌ ಆಗಿಯೂ ರೂಹಿ ಕೆಲಸ ಮಾಡಿದ್ದರು. ಆದರೆ, ಕೋವಿಡ್‌ ಸಮಯದಲ್ಲಿ ಸೋಂಕಿಗೆ ತುತ್ತಾಗಿದ್ದ ರೂಹಿ ಅಂದಿನಿಂದಲೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅದಕ್ಕಾಗಿ ಅವರು ನಿರಂತರವಾಗಿ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ, ಅಂಗಾಂಗ ವೈಫಲ್ಯದಿಂದ ರೂಹಿ ಸಾವು ಕಂಡಿದ್ದಾರೆ. ಆದರೆ, ಅಂಗಾಂಗ ವೈಫಲ್ಯಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. 2009ರಲ್ಲಿ ಪ್ರೀತಿ ರೂಹಿಯನ್ನು ವಿವಾಹವಾಗಿದ್ದ ಸೆಂಥಿಲ್‌ ಕುಮಾರ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ.