ದೇಶದ ಎಲ್ಲಡೆ ಇರುವ 4 ಸಾವಿರಕ್ಕೂ ಅಧಿಕ ಮಲ್ಟಿಫ್ಲೆಕ್ಸ್‌ಗಳಲ್ಲಿ ಅಕ್ಟೋಬರ್‌ 13 ರಂದು ನೀವು ಯಾವುದೇ ಸಿನಿಮಾ ನೋಡಿದರೂ, ಅದಕ್ಕೆ ಬರೀ 99 ರೂಪಾಯಿ ದರ ಇರಲಿದೆ. ಯಾವ ಕಾರಣಕ್ಕೆ ಅನ್ನೋ ಕುತೂಹಲ ನಿಮ್ಮಲ್ಲಿದ್ಯಾ? 

ನವದೆಹಲಿ (ಸೆ.21): ಹಾಗೇನಾದರೂ ಸಿನಿಮಾಗಳಿಗೆ ಹೋಗುವ ಪ್ಲ್ಯಾನ್‌ ಇದ್ದಲ್ಲಿ, ಅಕ್ಟೋಬರ್‌ 13ರ ಶುಕ್ರವಾರ ನಿಮಗೆ ಶುಭದಿನ. ಯಾಕೆಂದರೆ, ಅಕ್ಟೋಬರ್‌ 23 ರಂದು ಮಲ್ಟಿಫ್ಲೆಕ್ಸ್‌ಗಳಲ್ಲಿ ನೀವು ಯಾವುದೇ ಸಿನಿಮಾ ನೋಡಿದ್ರೂ ಅದಕ್ಕೆ ದರ ಬರೀ 99 ರೂಪಾಯಿ. ದೇಶದಲ್ಲಿ ಅ.13 ಅನ್ನು ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದರ ಸಲುವಾಗಿ ಆ ದಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ಯಾವುದೇ ಸಿನಿಮಾ ನೋಡಿದರೂ ಅದಕ್ಕೆ 99 ರೂಪಾಯಿ ದರ ಇರಲಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗುರುವಾರ ಪ್ರಕಟಿಸಿದೆ.

ದೇಶಾದ್ಯಂತದ ಸಿನಿಮಾ ಹಾಲ್‌ಗಳಲ್ಲಿ ಸಿನಿ-ವೀಕ್ಷಕರಿಗೆ ಕೇವಲ ರೂ 99 ಶುಲ್ಕ ವಿಧಿಸಲಾಗುತ್ತದೆ ಎಂದು ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ವ್ಯಾಪಾರ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಅಸೋಸಿಯೇಷನ್‌, "ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನ ಬಂದಿದೆ. ಸಿನಿಮೀಯ ಅನುಭವಕ್ಕಾಗಿ ಭಾರತದಾದ್ಯಂತ 4000+ ಪರದೆಗಳಲ್ಲಿ ನಮ್ಮೊಂದಿಗೆ ಜೊತೆಯಾಗಿದೆ. ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ ರೂ. 99. ಇದು ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ಸ್ನೇಹಿತರೊಂದಿಗೆ ಆನಂದಿಸಲು ವಿಶೇಷ ದಿನವಾಗಿದೆ' ಎಂದು ಬರೆದುಕೊಂಡಿದೆ. 



ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್‌ 23 ರಂದು ಆಚರಣೆ ಮಾಡಲಾಗಿತ್ತು. ಈ ಆಫರ್‌ಗಳು ರಿಕ್ಲೇನರ್‌ ಹಾಗೂ ಪ್ರೀಮಿಯಂ ಮಾದರಿಗೆ ಅನ್ವಯಿಸೋದಿಲ್ಲ ಎಂದು ಅಸೋಸಿಯೇಷನ್‌ ಮಾಹಿತಿ ನೀಡಿದೆ.

Scroll to load tweet…