ವಾಷಿಂಗ್ಟನ್‌[ಫೆ.19]: ಮುಂಬೈ ಮೂಲದ ‘ವಿ ಅನ್‌ಬೀಟಬಲ್‌‘ ನೃತ್ಯ ತಂಡ ಜನಪ್ರಿಯ ರಿಯಾಲಿಟಿ ಶೋ ‘ಅಮೆರಿಕ ಹ್ಯಾಸ್‌ ಗಾಟ್‌ ಟ್ಯಾಲೆಂಟ್‌ ಸೀಸನ್‌-2’ದಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದೆ.

ಕಾರ್ಯಕ್ರಮದ ತೀರ್ಪುಗಾರರಾದ ಸೈಮನ್‌ ಕೋವೆಲ್‌, ಹೈಡಿ ಕ್ಲುಮ್‌, ಆಲೇಶಾ ಡಿಕ್ಸನ್‌ ಮತ್ತು ಹೋವಿ ಮ್ಯಾಂಡೆಲ್‌ ಪ್ರಶಸ್ತಿಯನ್ನು ಪ್ರಕಟಿಸಿದ್ದು, ವಿ ಅನ್‌ ಬೀಟಲ್‌ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಿದ್ದಾರೆ.

ಮುಂಬೈನ 29 ಸದಸ್ಯರನ್ನು ಒಳಗೊಂಡ ನೃತ್ಯ ತಂಡ ಇದಾಗಿದ್ದು, ಅವರಲ್ಲಿ ಬಹುತೇಕರು ನಗರದ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಾಗಿದ್ದಾರೆ. ಕಳೆದ ವರ್ಷದ ಸೀಸನ್‌-1ರಲ್ಲಿ ವಿ ಅನ್‌ಬೀಟಬಲ್‌ ತಂಡ 4ನೇ ಸ್ಥಾನ ಪಡೆದುಕೊಂಡಿತ್ತು. ಸಾಹಸಮಯ ನೃತ್ಯ ಪ್ರದರ್ಶನಗಳ ಮೂಲಕ ಈ ತಂಡದ ಸದಸ್ಯರು ಮನೆ ಮಾತಾಗಿದ್ದರು.

ಈ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.