ಮುಂಬೈ[ಜೂ. 21]  ಸೋನಾಕ್ಷಿ ಸಿನ್ಹಾ, ವರುಣ್ ಶರ್ಮಾ ಮತ್ತು ಬಾದ್ ಶಾ ಅಭಿನಯದ ‘ಖಾಂದಾನಿ ಶಫ್ಖಾನಾ’ ಟ್ರೇಲರ್ ಬಿಡುಗಡೆಯಾಗಿದ್ದು ಯು ಟ್ಯೂಬ್ ನಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ.

ಎರಡು ನಿಮಿಷದ ವಿಡಿಯೋ ಅನೇಕ ಅಂಶಗಳನ್ನು ಹೇಳುತ್ತಾಹೋಗುತ್ತದೆ. ಪಂಜಾಬಿ ಹುಡುಗಿಯಾಗಿ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ. ಸೆಕ್ಸ್ ಮತ್ತು ಸೆಕ್ಸ್ ಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಕ್ಲಿನಿಕ್ ಒಂದನ್ನು ನಡೆಸುವ ಹುಡುಗಿಯಾಗಿ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ. ವರುಣ್ ಶರ್ಮಾ ಸೋನಾಕ್ಷಿಯ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ.