ಬೆಂಗಳೂರು [ಮಾ. 10] ಇದು ನಿಜಕ್ಕೂ  ಆಘಾತಕಾರಿ ಸುದ್ದಿ. ನಟಿ ವಿಜಯಲಕ್ಷ್ಮೀಗೆ  ಸ್ಯಾಂಡಲ್ ವುಡ್ ನಟನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.  ಹಣಕಾಸಿನ ನೆರವು ನೀಡುವ ನೆಪದಲ್ಲಿ ಕಿರುಕುಳ ನೀಡುರುವ ಆರೋಪದ ಮೇಲೆ ದೂರು ದಾಖಲಾಗಿದೆ.

ನಟ ರವಿ ಪ್ರಕಾಶ್ ಮೇಲೆ ಆರೋಪ ಬಂದಿದೆ.  ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ.  ಮಲ್ಯ ಆಸ್ಪತ್ರೆಯಲ್ಲಿ ವಿಜಯಲಕ್ಷ್ಮಿ ಚಿಕಿತ್ಸೆ ಪಡೆಯುತ್ತಿದ್ದ  ವೇಳೆ ಒಂದು ಲಕ್ಷ ರೂ. ಸಹಾಯ ಮಾಡಿದ್ದ ನಟ ರವಿ ಪ್ರಕಾಶ ನಂತರ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ.

ವಿಜಯಲಕ್ಷ್ಮಿ  ಮಲ್ಯ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಆಸ್ಪತ್ರೆಯಿಂದ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರೋ ನಟಿ ವಿಜಯಲಕ್ಷ್ಮೀ ತಮ್ಮ ನೋವು ಹೊರ ಹಾಕಿದ್ದಾರೆ.  ವಿಜಯಲಕ್ಷ್ಮೀ ಅಕ್ಕ ಉಷಾದೇವಿ ದೂರು ನೀಡಿದ್ದಾರೆ.